ಮಣಿಪಾಲದಲ್ಲಿ ತಿರಂಗಾ ಯಾತ್ರೆ

ಶಾಸಕ ಯಶಪಾಲ್​ ಎ. ಸುವರ್ಣ ತಿರಂಗಾ ಯಾತ್ರೆಗೆ ಚಾಲನೆ ನೀಡಿದರು.
ಶಾಸಕ ಯಶಪಾಲ್​ ಎ. ಸುವರ್ಣ ತಿರಂಗಾ ಯಾತ್ರೆಗೆ ಚಾಲನೆ ನೀಡಿದರು.
Published on
ಉಡುಪಿ: ದೇಶದ ಏಕತೆ, ಅಭಿವೃದ್ದಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. ಯುವಶಕ್ತಿ ದೇಶದ ಆಸ್ತಿಯಾಗಿದ್ದು, ಅಖಂಡತೆಯನ್ನು ರಕ್ಷಿಸಲು ಪ್ರೇರಣೆ ನೀಡಬೇಕು ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ. ಅವಿನಾಶ್​ ಶೆಟ್ಟಿ ಹೇಳಿದರು.
ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಣಿಪಾಲದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳು ಹಾಗೂ ಸಂ ಸಂಸ್ಥೆಗಳ ಸಹಯೋಗದಲ್ಲಿ ಮಣಿಪಾಲ ಕೆನರಾ ಬ್ಯಾಂಕ್​ನ ವೃತ್ತ ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯಲ್ಲಿ ಅವರು ಮಾತನಾಡಿದರು.
ಶಾಸಕ ಯಶಪಾಲ್​ ಎ. ಸುವರ್ಣ ತಿರಂಗಾ ಯಾತ್ರೆಗೆ ಚಾಲನೆ ನೀಡಿದರು. ಈ ಸಂದರ್ಭ ಆದರ್ಶ ಆಸ್ಪತ್ರೆಯ ವೈದ್ಯಕಿಯ ನಿರ್ದೇಶಕ ಡಾ.ಜಿ.ಎಸ್​. ಚಂದ್ರಶೇಖರ್​, ಪ್ರಸಾದ್​ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆ ಸಮೂಹ ಸಂಸ್ಥೆಗಳ ವೈದ್ಯಕಿಯ ನಿರ್ದೇಶಕ ಡಾ. ಕೃಷ್ಣಪ್ರಸಾದ್​, ಕೆನರಾ ಬ್ಯಾಂಕ್​ನ ಡಿಜಿಎಂ ಅಶೋಕ್​ ಕುಮಾರ್​, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್​ ಅಧ್ಯಕ್ಷ ಬಿ. ಜಯಕರ್​ ಶೆಟ್ಟಿ ಇಂದ್ರಾಳಿ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ, ಪ್ರಮುಖರಾದ ಕೆ. ಉದಯ ಕುಮಾರ್​ ಶೆಟ್ಟಿ, ಪ್ರಭಾಕರ್​ ಪೂಜಾರಿ, ದಿನೇಶ್​ ಅಮೀನ್​, ಉದ್ಯಮಿ ಅಜೆಯ್​ ಪಿ. ಶೆಟ್ಟಿ, ಶ್ರೀನಿವಾಸ ಪೂಜಾರಿ, ಡಾ.ವಿಜಯೇಂದ್ರ ವಸಂತ್​, ಶಿವಾನಂದ ನಾಯಕ್​, ದಿನಕರ್​ ಶೆಟ್ಟಿ ಹೆರ್ಗ, ಶ್ರೀಕಾಂತ್​ ನಾಯಕ್​ ಅಲೆವೂರು, ಮಟ್ಟಾರು ವಸಂತ್​ ಕಿಣಿ, ಉಮೇಶ್​ ನಾಯ್ಕ್​, ರಾಜು ಕುಲಾಲ್​, ದಿನೇಶ್​ ಸಹಿತ ಮೊದಲಾದವರು ಉಪಸ್ಥಿತರಿದ್ದರು.

ಟೈಗರ್​ ಸರ್ಕಲ್​, ಸಿಂಡಿಕೇಟ್​ ಸರ್ಕಲ್​ ಮಾರ್ಗವಾಗಿ ಕಾಯಿನ್​ ಸರ್ಕಲ್​ನಲ್ಲಿ ಯಾತ್ರೆ ಸಮಾಟನಗೊಂಡಿತು. ಸಾವಿರಾರು ವಿದ್ಯಾರ್ಥಿಗಳು, ನಾಗರಿಕರು ಭಾಗವಹಿಸಿದ್ದರು.
"

ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ, ಬಲಿದಾನಗೈದವರ, ಹಗಲಿರುಳೆನ್ನೆದೇ ದೇಶದ ಗಡಿ ಕಾಯುತ್ತಿರುವ ವೀರ ಯೋಧರ ಸ್ಮರಣೆ ಹಾಗೂ ದೇಶದ ಅಖಂಡತೆ, ಒಗ್ಗಟ್ಟಿನ ಪ್ರದರ್ಶನಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ.

— ಶಾಸಕ ಯಶಪಾಲ್​ ಎ. ಸುವರ್ಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net