ಹೆದ್ದೆರೆಗಳು ತೀರಕ್ಕೆ ಅಪ್ಪಳಿಸುತ್ತಿದ್ದು, ದಡದಲ್ಲಿರಿಸಿದ್ದ ದೋಣಿಗಳು ಅಪಾಯಕ್ಕೆ ಸಿಲುಕಿದ್ದು, ಮೀನುಗಾರರು ದೋಣಿಗಳನ್ನು ಸ್ಥಳಾಂತರ ಮಾಡಲು ಮುಂದಾಗಿದ್ದಾರೆ. ದಡದಲ್ಲಿದ್ದ ಮೀನುಗಾರರ ಸಣ್ಣ ಪುಟ್ಟ ಶೆಡ್‌ಗಳಿಗೂ ಹಾನಿಯಾಗಿದ್ದು, ದೋಣಿಯ ಸಮೀಪ ಇರಿಸಿದ್ದ ಕೆಲವು ಬಲೆಗಳು ಕೊಚ್ಚಿ ಹೋಗಿವೆ. ಕಡಲ್ಕೊರೆತ ತಡೆಯುವ ಉದ್ದೇಶದಿಂದ ನಿರ್ಮಿಸಲಾಗಿರುವ ತಡೆಗೋಡೆಯ ಕಲ್ಲುಗಳು ಕಡಲ ಒಡಲು ಸೇರುತ್ತಿವೆ. ಸಮುದ್ರ ತೀರದಲ್ಲಿರುವ ತೆಂಗಿನ ಮರಗಳು ಕುಸಿದು ಕಡಲ ಪಾಲಾಗುವ ಭೀತಿ ಎದುರಾಗಿದೆ.