ಯುಎಇಯಲ್ಲಿ ತುಂಬೆ ಗ್ರೂಪ್ 29 ವರ್ಷಗಳ ಸಾರ್ಥಕ ಪಯಣ

ತುಂಬೆ ಗ್ರೂಪ್  ಸಂಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದೀನ್
ತುಂಬೆ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದೀನ್
Published on
ಮಂಗಳೂರು: ಶಿಕ್ಷಣ, ಆರೋಗ್ಯ ಸೇವೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸಿರುವ ತುಂಬೆ ಗ್ರೂಪ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ತನ್ನ 29ನೇ ವರ್ಷದ ಪಯಣವನ್ನು ಸಂಭ್ರಮದಿಂದ ಆಚರಿಸಿತು.
ಮೂರು ದಶಕದ ಅವಧಿಯಲ್ಲಿ ಹಲವು ಕ್ಷೇತ್ರಗಳಲ್ಲಿ ಸಂಸ್ಥೆ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದೆ. 1997ರಲ್ಲಿ ಡಾ.ತುಂಬೆ ಮೊಯ್ದೀನ್ ತುಂಬೆ ಗ್ರೂಪ್ ಸ್ಥಾಪಿಸಿದರು. ಸಣ್ಣ ಮಟ್ಟದಿಂದ ಆರಂಭವಾದ ಈ ಸಂಸ್ಥೆ ಇಂದು ವೈದ್ಯಕೀಯ ಶಿಕ್ಷಣ, ಆಸ್ಪತ್ರೆಗಳು, ಸಂಶೋಧನೆ, ತಂತ್ರಜ್ಞಾನ, ಆತಿಥ್ಯ ಸೇವೆ, ಮಾಧ್ಯಮ ಹಾಗೂ ರಿಟೇಲ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿ ಬೆಳೆದಿದೆ.
ತುಂಬೆ ಗ್ರೂಪ್‌ನ ಪ್ರಮುಖ ಸಂಸ್ಥೆಯಾದ ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಇಂದು ಗಲ್ಫ್ ಪ್ರದೇಶದ ಪ್ರಮುಖ ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಫಾರ್ಮಸಿ, ಆರೋಗ್ಯ ವಿಜ್ಞಾನ, ನರ್ಸಿಂಗ್ ಜತೆಗೆ ಆರೋಗ್ಯ ಕ್ಷೇತ್ರದ ಕೃತಕ ಬುದ್ಧಿಮತ್ತೆ ಮತ್ತು ಪಶು ವೈದ್ಯಕೀಯ ಸಹಿತ ವಿವಿಧ ವಿಭಾಗಗಳಲ್ಲಿ ಶಿಕ್ಷಣ ಮತ್ತು ತರಬೇತಿ ನೀಡಲಾಗುತ್ತಿದೆ.
ಮುಂದಿನ ಪ್ರಮುಖ ಯೋಜನೆಯಾದ ತುಂಬೆ ಮೆಡಿಸಿಟಿ ದುಬೈ ಅತ್ಯಾಧುನಿಕ ವೈದ್ಯಕೀಯ ಸೇವೆ, ಶಿಕ್ಷಣ ಮತ್ತು ಸಂಶೋಧನೆಯನ್ನು ಒಟ್ಟುಗೂಡಿಸುವ ಹೊಸ ತಲೆಮಾರಿನ ಅಕಾಡೆಮಿಕ್ ಹೆಲ್ತ್ ಸಿಟಿಯಾಗಿ ಅಭಿವೃದ್ಧಿಯಾಗುತ್ತಿದೆ. ಇತ್ತೀಚೆಗೆ ಅಜ್ಮಾನ್‌ನಲ್ಲಿ ಪಶುವೈದ್ಯಕೀಯ ಆಸ್ಪತ್ರೆ ಹಾಗೂ ಶಾರ್ಜಾದಲ್ಲಿ ಮಾನಸಿಕ ಮತ್ತು ಪುನರ್ವಸತಿ ಆಸ್ಪತ್ರೆ ಆರಂಭಿಸಿರುವ ಸಂಸ್ಥೆ, ತುಂಬೆ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಮೂಲಕ ಐದು ದೇಶಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆ.

ಸಂಸ್ಥೆಯ ಹೊಸ ಯೋಜನೆ

ಉತ್ಸಾಹ ಮತ್ತು ಮಹತ್ವಾಕಾಂಕ್ಷೆಯೊಂದಿಗೆ ಮುಂದಿನ ದಿನಗಳನ್ನು ಎದುರು ನೋಡುತ್ತಿದೆ. ಅಕಾಡೆಮಿಕ್ ಹೆಲ್ತ್ ಸಿಸ್ಟಂ ವಿಸ್ತರಣೆ, ಸಂಶೋಧನೆಗೆ ಹೆಚ್ಚಿನ ಹೂಡಿಕೆ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಕೆ ಹಾಗೂ ಸಮುದಾಯಗಳಿಗೆ ಸೇವೆ ನೀಡುವ ಮೂಲಸೌಕರ್ಯ ನಿರ್ಮಾಣದತ್ತ ಸಂಸ್ಥೆ ಕ್ರಮಗಳನ್ನು ಕೈಗೊಂಡಿದೆ.

ಸಂಸ್ಥೆ ವಿಶೇಷತೆಗಳು

* 175ಕ್ಕೂ ಹೆಚ್ಚು ದೇಶಗಳ 1.6 ಕೋಟಿಗೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ
* 7 ಅಕಾಡೆಮಿಕ್ ಮತ್ತು ಸ್ಪೆಷಾಲಿಟಿ ಆಸ್ಪತ್ರೆಗಳ ಜಾಲ.

ಶಿಕ್ಷಣ, ಆರೋಗ್ಯ ಸೇವೆ ಮತ್ತು ಸಂಶೋಧನೆಗಳ ಮೂಲಕ ಸಮಾಜವನ್ನು ರೂಪಿಸುವ ದೃಷ್ಟಿಯಿಂದ ನಮ್ಮ ಪಯಣ ಮುಂದುವರಿಯುತ್ತಿದೆ. ಯುಎಇ ಈ ಕನಸನ್ನು ಸಾಕಾರಗೊಳಿಸಲು ಅಗತ್ಯ ಅವಕಾಶಗಳನ್ನು ಒದಗಿಸಿದೆ. ಇಂದಿನ ಸಂಕೀರ್ಣ ಸವಾಲುಗಳ ಯುಗದಲ್ಲಿ ಬಲಿಷ್ಠ ಆರೋಗ್ಯ ವ್ಯವಸ್ಥೆಗಳು, ಜ್ಞಾನಾಧಾರಿತ ಶಿಕ್ಷಣ ಮತ್ತು ಅರ್ಥಪೂರ್ಣ ಸಂಶೋಧನೆಯ ಮಹತ್ವವು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ತುಂಬೆ ಗ್ರೂಪ್ ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ. ಭವಿಷ್ಯವನ್ನು ಮುಂಚಿತವಾಗಿ ಊಹಿಸಿ, ಆರೋಗ್ಯಕರ ಮತ್ತು ಹೆಚ್ಚು ಸಹನಶೀಲ ಸಮಾಜವನ್ನು ನಿರ್ಮಿಸುವುದು ನಮ್ಮ ಪ್ರಮುಖ ಗುರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net