ಯುಎಇಯಲ್ಲಿ ತುಂಬೆ ಗ್ರೂಪ್ 28 ಸಂವತ್ಸರದ ಸಂಭ್ರಮ

ಯುಎಇಯಲ್ಲಿ ನಡೆದ ತುಂಬೆ ಗ್ರೂಪ್ 28 ಸಂವತ್ಸರದ ಸಂಭ್ರಮದಲ್ಲಿ ಜೀವಮಾನದ ಸಾಧನಗಾಗಿ ಸಾಧಕರಾದ ಮೊಹಮ್ಮದ್ ಮೀರಾನ್ ಮತ್ತು ಡಾ.ಬಿ.ಕೆ ಯೂಸುಫ್ ಅವರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ದುಬೈನ ಭಾರತದ ಕೌನ್ಸಿಲ್ ಜನರಲ್ ಸತೀಶ್ ಕುಮಾರ್ ಶಿವನ್ ಇದ್ದರು.
ಯುಎಇಯಲ್ಲಿ ನಡೆದ ತುಂಬೆ ಗ್ರೂಪ್ 28 ಸಂವತ್ಸರದ ಸಂಭ್ರಮದಲ್ಲಿ ಜೀವಮಾನದ ಸಾಧನಗಾಗಿ ಸಾಧಕರಾದ ಮೊಹಮ್ಮದ್ ಮೀರಾನ್ ಮತ್ತು ಡಾ.ಬಿ.ಕೆ ಯೂಸುಫ್ ಅವರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ದುಬೈನ ಭಾರತದ ಕೌನ್ಸಿಲ್ ಜನರಲ್ ಸತೀಶ್ ಕುಮಾರ್ ಶಿವನ್ ಇದ್ದರು.
Published on
ಮಂಗಳೂರು: ಯುಎಇಯಲ್ಲಿ ತುಂಬೆ ಗ್ರೂಪ್ ತನ್ನ 28ನೇ ವರ್ಷದ ಯಶಸ್ವಿ ಪ್ರಯಾಣವನ್ನು ಸಂಭ್ರಮಿಸಲು ಶಾರ್ಜಾದ ತುಂಬೆ ಗ್ರೂಪ್ ವಿಲ್ಲಾದಲ್ಲಿ ಕರ್ನಾಟಕ ಸಮುದಾಯದೊಂದಿಗೆ ವಿಶೇಷ ಸಾಂಸ್ಕೃತಿಕ-ಸಾಮಾಜಿಕ ಕಾರ್ಯಕ್ರಮ ಆಯೋಜಿಸಿತು. ಈ ಸಂದರ್ಭ ವ್ಯವಹಾರ ಮತ್ತು ಸಮಾಜಮುಖಿ ಸೇವೆಗೆ ವಿಶಿಷ್ಟ ಕೊಡುಗೆ ನೀಡಿದ ಇಬ್ಬರು ಗಣ್ಯರಿಗೆ ಜೀವಮಾನದ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾಮಾಜಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಮಹಾನ್ ಸಾಧಕ ಡಾ.ತುಂಬೆ ಮೊಯ್ದೀನ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಂಬೆ ಗ್ರೂಪ್ ಸಂಸ್ಥೆಯ ಬೆಳವಣಿಗೆಯನ್ನು ದೃಶ್ಯಾವಳಿ ಪ್ರದರ್ಶನ ಮೂಲಕ ವಿವರಿಸಲಾಯಿತು. ಡಾ.ತುಂಬೆ ಮೊಯ್ದೀನ್ ಪ್ರಾಸ್ತಾವಿಕ ಭಾಷಣದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಸಂಶೋಧನೆ ಕ್ಷೇತ್ರಗಳಲ್ಲಿ ತುಂಬೆ ಗ್ರೂಪ್ ನಿರ್ಮಿಸಿದ ಜಾಗತಿಕ ಮಾನದಂಡಗಳನ್ನು ಸ್ಮರಿಸಿ, ಯುಎಇ ನಾಯಕತ್ವ ಹಾಗೂ ಕರ್ನಾಟಕ ಸಮುದಾಯದ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
ಕರ್ನಾಟಕದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ದುಬೈನ ಭಾರತದ ಕೌನ್ಸಿಲ್ ಜನರಲ್ ಸತೀಶ್ ಕುಮಾರ್ ಶಿವನ್ ಭಾಗವಹಿಸಿದ್ದು, ತಮ್ಮ ಸಂದೇಶದಲ್ಲಿ ಗಲ್ಪ್ ಪ್ರದೇಶದಲ್ಲಿ ಭಾರತೀಯ ಸಮುದಾಯ ನೀಡಿರುವ ಕೊಡುಗೆ ಹಾಗೂ ತುಂಬೆ ಗ್ರೂಪ್‌ನ ಜಾಗತಿಕ ಮಟ್ಟದ ಸಾಧನೆಗಳನ್ನು ಪ್ರಶಂಸಿದರು. ಭಾರತೀಯ ಸಮುದಾಯದ ನಾಯಕರಾದ ಡಾ.ಕಾಪು ಮುಹಮ್ಮದ್, ಪ್ರವೀಣ್ ಶೆಟ್ಟಿ, ಮೊಹಮ್ಮದ್ ಅಲಿ ಉಚ್ಚಿಲ್, ಶಶಿಧರ ನಾಗಾರಾಜಪ್ಪ ಮತ್ತು ಹಿದಾಯತ್ ಅಡ್ಡೂರು ಏಕತೆ, ಸೇವೆ ಮತ್ತು ಸಾಮೂಹಿಕ ಪ್ರಗತಿಯ ಮಹತ್ವವನ್ನು ವಿವರಿಸಿದರು.

ಲೈಫ್‌ಟೈಮ್ ಅಚೀವ್‌ಮೆಂಟ್ ಅವಾರ್ಡ್

ಕಾರ್ಯಕ್ರಮದ ಪ್ರಮುಖ ಅಂಗವಾಗಿ ಲೈಫ್‌ಟೈಮ್ ಅಚೀವ್‌ಮೆಂಟ್ ಅವಾರ್ಡ್ ಅನ್ನು ದುಬೈಯ ಎಂಕೋ ಇಂಟರ್ನ್ಯಾಷನಲ್ & ಇಲೆಕ್ಟ್ರಿಕ್ ವೇ ಚೇರ್ಮನ್ ಮೊಹಮ್ಮದ್ ಮೀರಾನ್ ಇವರಿಗೆ ಪ್ರದಾನ ಮಾಡಲಾಯಿತು. ಬ್ಯಾರೀಸ್ ಕಲ್ಚರಲ್ ಫೋರಮ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಅವರ ದಶಕಗಳ ಸೇವೆ, ನಾಯಕತ್ವ, ಮತ್ತು ಸಮುದಾಯಾಭಿವೃದ್ಧಿಯಲ್ಲಿನ ಮಹತ್ತರ ಕೊಡುಗೆಗಾಗಿ ಸನ್ಮಾನಿಸಲಾಯಿತು. ವಂದನಾ ಸಮರ್ಪಣೆ ಬಳಿಕ ಸ್ನೇಹಸಮ್ಮಿಲನ, ಗುಂಪು ಛಾಯಾಚಿತ್ರಗಳು ಮತ್ತು ಸಹ ಭೋಜನದೊಂದಿಗೆ ಅನನ್ಯ ಕ್ಷಣಗಳ ಕಾರ್ಯಕ್ರಮವಾಗಿ ಸಮಾರೋಪಗೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net