

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವತಿಯಿಂದ ಪ್ರದಾನ ಮಾಡಲಾಗುವ ಸಾಹಿತಿ ಮೇಟಿ ಮುದಿಯಪ್ಪ ಸ್ಮರಣಾರ್ಥ 'ಮಲಬಾರ್ ವಿಶ್ವಸಾಹಿತ್ಯ ಪ್ರಶಸ್ತಿ-2026'ಕ್ಕೆ ರಾಜ್ಯದ ಮೂವರು ಹಿರಿಯ ಸಾಹಿತಿಗಳು ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಡಾ. ಭೈರಮಂಗಲ ರಾಮೇಗೌಡ (ಸಮಗ್ರ ಸಾಹಿತ್ಯ), ಉಡುಪಿಯ ಹಿರಿಯ ಸಾಹಿತಿ ಇಂದಿರಾ ಹಾಲಂಬಿ (ಮಕ್ಕಳ ಸಾಹಿತ್ಯ), ಡಿಆರ್ಡಿಒ ಮಾಜಿ ಮುಖ್ಯ ಸಂಪರ್ಕಾಧಿಕಾರಿ ಮೈಸೂರಿನ ಜಯಪ್ರಕಾಶ್ ಪುತ್ತೂರು (ಅನುವಾದ ಸಾಹಿತ್ಯ) ಆಯ್ಕೆಯಾದವರು.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ನ ಉಡುಪಿ ಶಾಖೆಯಲ್ಲಿ ನ.8ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪತ್ರ, ಫಲಕ, ಬೆಳ್ಳಿ ಪದಕ ಹಾಗೂ ನಗದು 5 ಸಾವಿರ ರೂ.ನೊಂದಿಗೆ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಸಮಿತಿಯ ಸಂಚಾಲಕಿ ಸಂಧ್ಯಾ ಶೆಣೈ ಉಡುಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.