ದೋಣಿ ಮಗುಚಿ ಮೂವರು ಮೀನುಗಾರರಿಗೆ ಗಾಯ

ACCIDENT
ACCIDENT
Published on

ಕಾಸರಗೋಡು: ಪಳ್ಳಿಕೆರೆಯಲ್ಲಿ ಮೀನುಗಾರಿಕೆ ನಡೆಸಿ ವಾಪಸಾಗುತ್ತಿದ್ದ ದೋಣಿ ಸಮುದ್ರದಲ್ಲಿ ಮಗುಚಿ ಬಿದ್ದು ಮೂವರು ಗಾಯಗೊಂಡಿದ್ದಾರೆ. ಇದರಿಂದ ಮೀನುಗಾರಿಕೆಯಿಂದ ಸಂಗ್ರಹಿಸಲಾದ ಅಪಾರ ಪ್ರಮಾಣದ ಮೀನು ಹಾಗೂ ಮೀನುಗಾರಿಕಾ ಉಪಕರಣಗಳು ಸಮುದ್ರಪಾಲಾಗಿವೆ.

ಅಪಘಾತಕ್ಕೀಡಾದ ದೋಣಿಯಲ್ಲಿ 11 ಮಂದಿ ಕಾರ್ಮಿಕರಿದ್ದರು. ಅದರಲ್ಲಿ ತಮಯೂನ್(40), ವಿನೋದ್(30) ಮತ್ತು ಬಿಲಿಗೇಶ್(40) ಎಂಬುವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಅಪಾಯದಿಂದ ಪಾರಾಗಿದ್ದಾರೆ. ಪಳ್ಳಿಕ್ಕೆರೆ ಮಠ ಕಡಪುರದ ಪುಷ್ಪರಾಜ್ ಎಂಬುವರ ಮಾಲೀಕತ್ವದ ದೋಣಿ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net