ಜೂಜಾಡುತ್ತಿದ್ದ ಮೂವರ ಬಂಧನ

Arrest
Arrest
Published on
ಕಾಸರಗೋಡು: ಜೂಜಾಟದಲ್ಲಿ ನಿರತರಾಗಿದ್ದ ಮೂವರನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಡಿಬೈಲು ರೈಸಾನ್ ಮಂಜಿಲ್ ನಿವಾಸಿ ಅಬ್ದುಲ್ ಎಂ.ಎಸ್, ಅಂಗಡಿಪದವು ಶಾಂತಿನಗರದ ಪ್ರಶಾಂತ್ ಎಸ್., ಕಡುಂಬಾರ್ ಜುವಾ ಮಸೀದಿ ಬಳಿಯ ಮೊಯ್ದೀನ್ ಅಬ್ಬು ಬಂಧಿತರು. ಜೂಜಿಗೆ ಬಳಸಿದ್ದ 6 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಭಾನುವಾರ ತಡರಾತ್ರಿ ಬಂಗ್ರಮಂಜೇಶ್ವರ ಬಳಿಯ ವಾಮಂಜೂರಿನ ಜನವಾಸವಿಲ್ಲದ ಹಿತ್ತಲಲ್ಲಿ ಜೂಜಾಟದಲ್ಲಿ ನಿರತರಾಗಿರುವ ಬಗ್ಗೆ ಲಭಿಸಿದ ವಾಹಿತಿಯಂತೆ ಎಸ್‌ಐ ಅರ್ಜುನ್ ಅರವಿಂದ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net