ಮನೆಯಿಂದ ತೆರಳಿದವರು ಬಳಿಕ ನಾಪತ್ತೆ

MISSING
MISSING
Published on

ಕಾಸರಗೋಡು: ಉಪ್ಪಳ ಅಂಚಿಕಟ್ಟೆ ನಿವಾಸಿ ಅಶ್ರಫ್ ಮಂಜಿಲ್‌ನ ಹಮೀದ್ ಹಾಜಿ ಎಂಬುವರ ಪುತ್ರ ಅಬ್ದುಲ್ ರಹಮಾನ್ ಯು.ಎಚ್(48) ನಾಪತ್ತೆಯಾಗಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಜುಲೈ 25ರಂದು ಬೆಳಗ್ಗೆ 10 ಗಂಟೆಗೆ ಇವರು ಮನೆಯಿಂದ ಹೊರಗೆ ತೆರಳಿದ್ದರು. ವಿವಿಧೆಡೆ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ಸಹೋದರ ಮೊಹಮ್ಮದ್ ಬಶೀರ್ ಮಂಜೇಶ್ವರ ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net