

ವಾಹನ ಸವಾರರು ಹತ್ತಿರದ ರಸ್ತೆಯೆಂದು ವಿರುದ್ಧ ದಿಕ್ಕಿನಲ್ಲಿ ವಾಹನಗಳನ್ನು ಚಲಾಯಿಸುತ್ತಿದ್ದರು. ಅದಕ್ಕೀಗ ಕಡಿವಾಣ ಹಾಕಿರುವುದರಿಂದ ಒಂದಷ್ಟು ದೂರ ಸಂಚರಿಸಬೇಕಿದ್ದರೂ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಆದರೆ, ಕಾಪಿಕಾಡ್‌ವರೆಗೆ ಫ್ಲೈಓವರ್ ಮುಂದುವರಿಸಿದ್ದರೆ ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಹೊಸ ಸಮಸ್ಯೆ ಬರುತ್ತಿರಲಿಲ್ಲ.
ಏಕಮುಖ ಸಂಚಾರ ವ್ಯವಸ್ಥೆಯಿಂದ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ವಾಹನಗಳ ಸಂಚಾರ ಸುಗಮವಾಗಿದೆ. ತಿರುವು ಪಡೆಯಲು ಒಂದಷ್ಟು ದೂರ ಹೋಗಬೇಕಾದರೂ, ಇದು ಸಂಚಾರ ನಿಯಮ ಪಾಲನೆಯ ಜತೆಗೆ ಸಾರ್ವಜನಿಕರಲ್ಲಿ ಜಾಗೃತಿಯೂ ಮೂಡಿಸಿದಂತಾಗಿದೆ. ಈಗ ಜಾರಿಗೆ ತಂದಿರುವ ವ್ಯವಸ್ಥೆ ತಾತ್ಕಾಲಿಕವಾಗದಿರಲಿ, ಕಾಯಂ ಆಗಿ ಮುಂದುವರಿಯಲಿ.