ಕುಂದಾಪುರ: ಬೈಂದೂರು ತಾಲೂಕು ಮರವಂತೆಯಲ್ಲಿ ಶನಿವಾರ ಚಿನ್ನದ ಅಂಗಡಿಯ ಶಟರ್ ಒಡೆದು ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ ಹಾಗೂ ನಗದನ್ನು ದೋಚಲಾಗಿದೆ.
ಮರವಂತೆಯ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದಲ್ಲಿರುವ ವಾರುತಿ ಕಾಂಪ್ಲೆಕ್ಸ್‌ನಲ್ಲಿರುವ ಮಾಂಗಲ್ಯ ಚಿನ್ನದ ಅಂಗಡಿಯ ಶಟರ್ ಮುರಿದು ಒಳ ಪ್ರವೇಶಿಸಿದ ಕಳ್ಳರು ಅಂಗಡಿ ಡ್ರಾವರ್ ಮತ್ತು ಕ್ಯಾಬಿನ್‌ನಲ್ಲಿರುವ 1.44 ಲಕ್ಷ ರೂ. ಮೌಲ್ಯದ 600 ಗ್ರಾಂ ಬೆಳ್ಳಿ ಗಟ್ಟಿ ಮತ್ತು 1000 ರೂ. ಕಳವು ಮಾಡಿದ್ದಾರೆ.
ಸಮೀಪದ ಅಂಗಡಿಗಳಲ್ಲಿ ಅಳವಡಿಸಿದ ಸಿಸಿ ಕ್ಯಾಮರಾಗಳನ್ನು ಕಳ್ಳರು ಜಖಂಗೊಳಿಸಿದ್ದಾರೆ. ಗಂಗೊಳ್ಳಿ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.