ಮಹಾರಾಷ್ಟ್ರದ ಕರ್ಮಾಲಿ ಹಾಗೂ ಗೋವಾ ರೈಲು ನಿಲ್ದಾಣದ ಮಧ್ಯೆ ಈ ಘಟನೆ ನಡೆದಿದೆ. ಗುರುವಾರ ಬೆಳಗ್ಗೆ ರೈಲಿನಲ್ಲಿ ಯುವಕನೊಬ್ಬ ಇದ್ದಕ್ಕಿದಂತೆ ಅನುಮಾನಾಸ್ಪದವಾಗಿ ಅಲೆದಾಡುತ್ತಿದ್ದ, ರೈಲ್ವೆ ಟಿಕೆಟ್ ಕಲೆಕ್ಟರ್ ಲಕ್ಷ್ಮಣ್ ಪವಾರ್ ಆತನನ್ನು ವಿಚಾರಣೆ ನಡೆಸಲು ಪ್ರಯತ್ನಿಸಿದಾಗ ಬೋಗಿಯೊಳಗೆ ಓಡಲಾರಂಭಿಸಿದ್ದಾನೆ. ಅದೇ ಬೋಗಿಯಲ್ಲಿ ಮಂಗಳೂರಿನತ್ತ ಆಗಮಿಸುತ್ತಿದ್ದ ಪ್ರಯಾಣಿಕರಾದ ಕುಂದಾಪುರದ ನಾಗರಾಜ ಪೂಜಾರಿ, ಸಹ ಪ್ರಯಾಣಿಕರಾದ ವಾದಿರಾಜ ಸುರತ್ಕಲ್, ಮಂಜುನಾಥ ಶಾಂತಿ ಮುಂತಾದವರು ಯುವಕನನ್ನು ಸೆರೆಹಿಡಿದರು.