ಜನರ ಕೆಲಸದಲ್ಲಿ ವಿಳಂಬ ಸಲ್ಲದು

ಬ್ರಹ್ಮಾವರ ತಾಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆ ಬುಧವಾರ ಚಾಂತಾರು ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಬ್ರಹ್ಮಾವರ ತಾಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆ ಬುಧವಾರ ಚಾಂತಾರು ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
Published on

ಬ್ರಹ್ಮಾವರ:ಬ್ರಹ್ಮಾವರತಾಲೂಕು ಪಂಚಾಯಿತಿ ತ್ರೈಮಾಸಿಕಕೆಡಿಪಿ ಸಭೆ ಬುಧವಾರ ಚಾಂತಾರುಗ್ರಾಮ ಪಂಚಾಯಿತಿ ಸಭಾಂಗಣದಲ್ಲಿಕುಂದಾಪುರ ಶಾಸಕ ಕಿರಣ್ ಕುಮಾರ್ಕೊಡ್ಗಿ,ಉಡುಪಿಶಾಸಕ ಯಶ್‌ಪಾಲ್ ಸುವರ್ಣಉಪಸ್ಥಿತಿಯಲ್ಲಿ ನಡೆಯಿತು.

ಬಹುತೇಕಸರ್ಕಾರಿ ಇಲಾಖೆಗಳಲ್ಲಿ ಇಲಾಖಾಕೆಲಸಗಳು ವಿಳಂಬವಾಗುತ್ತಿರುವುದರಿಂದಸಾರ್ವಜನಿಕರಿಗೆ ತೊಂದರೆಯಾಗುತ್ತಿರುವಬಗ್ಗೆ ದೂರುಗಳು ಕೇಳಿಬರುತ್ತಿವೆ.ಜನರಕೆಲಸದಲ್ಲಿ ವಿಳಂಬ ಮಾಡದಂತೆ ಉಭಯಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಬ್ರಹ್ಮಾವರಸರ್ಕಾರಿ ಆಸ್ಪತ್ರೆಯಲ್ಲಿಮರಣೋತ್ತರ ಪರೀಕ್ಷೆಗೆ ಸೂಕ್ತವ್ಯವಸ್ಥೆ ಇಲ್ಲ.ಇತ್ತೀಚೆಗೆಮರಣೋತ್ತರ ಪರೀಕ್ಷೆಗಾಗಿ ಉಡುಪಿಜಿಲ್ಲಾಸ್ಪತ್ರೆಗೆ ಕೊಂಡು ಹೋದಾಗಅಲ್ಲಿದೂ ಸ್ಪಂದನೆ ಸಿಗಲಿಲ್ಲವೆಂದುಗ್ಯಾರಂಟಿ ಯೋಜನೆ ಅನುಷ್ಠಾನಸಮಿತಿ ತಾಲೂಕು ಅಧ್ಯಕ್ಷೆ ಡಾ.ಸುನೀತಾಶೆಟ್ಟಿ ಸಭೆ ಗಮನ ಸೆಳೆದರು.

ಪಡಿತರಚೀಟಿ,ಅಕ್ರಮಸಕ್ರಮ ಕಡತ ವಿಲೇವಾರಿ,ಬೀದಿನಾಯಿಗಳಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ತಹಸೀಲ್ದಾರ್ಶ್ರೀಕಾಂತ್ ಎಸ್.ಹೆಗ್ಡೆ,ತಾಲೂಕುಪಂಚಾಯಿತಿ ಆಡಳಿತಾಧಿಕಾರಿ ಕ್ಷಮಾಪಾಟೀಲ್,ತಾಲೂಕುಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಎಚ್.ವಿ.ಇಬ್ರಾಹಿಂಪುರ,ವಿವಿಧಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net