ವಿದ್ಯೆಗಿಂತ ಬೆಲೆಬಾಳುವ ಸಂಪತ್ತು ಇನ್ನೊಂದಿಲ್ಲ

ಮೂಡುಬಿದಿರೆ ಬಿಲ್ಲವ ಸಂಘ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಾಹಿತಿ ಬನ್ನಂಜೆ ಬಾಬು ಅಮೀನ್ ಅವರನ್ನು ಗೌರವಿಸಲಾಯಿತು. ಪ್ರಮುಖರಾದ ಡಾ. ಎಂ. ಮೋಹನ ಆಳ್ವ, ತಾರನಾಥ ಪೂಜಾರಿ, ಪದ್ಮರಾಜ್ ಆರ್.ಪೂಜಾರಿ, ಉಮೇಶ್ ಪೈ ಇತರರಿದ್ದರು.
ಮೂಡುಬಿದಿರೆ ಬಿಲ್ಲವ ಸಂಘ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಾಹಿತಿ ಬನ್ನಂಜೆ ಬಾಬು ಅಮೀನ್ ಅವರನ್ನು ಗೌರವಿಸಲಾಯಿತು. ಪ್ರಮುಖರಾದ ಡಾ. ಎಂ. ಮೋಹನ ಆಳ್ವ, ತಾರನಾಥ ಪೂಜಾರಿ, ಪದ್ಮರಾಜ್ ಆರ್.ಪೂಜಾರಿ, ಉಮೇಶ್ ಪೈ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಮಕ್ಕಳಿಗೆ ಕೋಟಿಗಟ್ಟಲೆ ಆಸ್ತಿ ಕೂಡಿ ಇಡುವ ಬದಲು ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನೇ ಸಮಾಜದ ಆಸ್ತಿಯನ್ನಾಗಿ ಮಾಡಬೇಕು. ವಿದ್ಯೆಗಿಂತ ಬೆಲೆಬಾಳುವ ಸಂಪತ್ತು ಮನುಷ್ಯನಿಗೆ ಇನ್ನೊಂದಿಲ್ಲ ಎಂದು ವಕೀಲ ಇರುವೈಲು ತಾರನಾಥ ಪೂಜಾರಿ ಅಭಿಪ್ರಾಯಪಟ್ಟರು.
ಮೂಡುಬಿದಿರೆ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ, ಶ್ರೀ ನಾರಾಯಣ ಗುರು ಸೇವಾದಳ, ಮಹಿಳಾ ಘಟಕ ಹಾಗೂ ಅಮೃತ ಮಹೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸಂಘದ ಅಮೃತ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಸೋಲೂರು ಮಠದ ವಿಖ್ಯಾತಾನಂದ ಶ್ರೀಗಳು ಆಶೀರ್ವಚನ ನೀಡಿದರು. ಕುವೈಟ್ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ರಾಘು ಸಿ. ಪೂಜಾರಿ ಅಮೃತ ವಿದ್ಯಾನಿಧಿಗೆ ಚಾಲನೆ ನೀಡಿದರು. ಜಿ. ಉಮೇಶ್ ಪೈ ಮೆರವಣಿಗೆಗೆ ಚಾಲನೆ ನೀಡಿದರು.
ನಾರಾಯಣ ಗುರು ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕೆ.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ ಆರ್. ಪೂಜಾರಿ, ಪ್ರಮುಖರಾದ ಸಿಎ ರಘುಪತಿ ಭಟ್, ಡಿ.ಸುವರ್ಣ ದುಬೈ, ಡಾ.ರಾಜಶೇಖರ ಕೋಟ್ಯಾನ್, ಪ್ರತಿಭಾ ಕುಳಾಯಿ, ಚಿತ್ತರಂಜನ್ ಬೋಳಾರ್, ಜಗದೀಶ್ಚಂದ್ರ ಡಿ.ಕೆ ಶುಭ ಹಾರೈಸಿದರು.
ಸಮಿತಿ ಗೌರವಾಧ್ಯಕ್ಷ ನಾರಾಯಣ ಪಿ.ಎಂ, ಎ.ಸಿ.ಎಫ್. ಪ್ರಕಾಶ್ ಪೂಜಾರಿ, ಪ್ರಮುಖರಾದ ಗಿರೀಶ್ ಕುಮಾರ್ ಹಂಡೇಲು, ದಿನೇಶ್ ಪೂಜಾರಿ, ಸವಿತಾ ದಿನೇಶ್, ಮೂರು ಘಟಕದ ಪದಾಧಿಕಾರಿಗಳು, ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಡಾ. ಮುರಳಿಕೃಷ್ಣ ಆರ್.ವಿ. ಸ್ವಾಗತಿಸಿದರು. ಡಾ.ರಮೇಶ್ ವಂದಿಸಿದರು. ರಾಮ್ ಕುಮಾರ್ ಮರ್ನಾಡ್ ಕಾರ್ಯಕ್ರಮ ನಿರೂಪಿಸಿದರು.

ಅಮೃತ ರತ್ನ ಬಿರುದು

ಹಿರಿಯ ಸಾಹಿತಿ ಬನ್ನಂಜೆ ಬಾಬು ಅಮೀನ್, ಕಂಕನಾಡಿ ಗರಡಿ ಅಧ್ಯಕ್ಷ ಕೆ.ಚಿತ್ತರಂಜನ್ ಅವರಿಗೆ ಅಮೃತರತ್ನ ಬಿರುದು ಪ್ರದಾನಿಸಲಾಯಿತು. ದಾನಿ ರಾಘು ಸಿ.ಪೂಜಾರಿ, ಕಬಡ್ಡಿ ವಿಶ್ವಕಪ್ ವಿಜೇತ ತಂಡದ ಸದಸ್ಯೆ ಧನಲಕ್ಷ್ಮೀ ಪೂಜಾರಿ, ಪಿ.ಕೆ.ರಾಜು ಪೂಜಾರಿ, ಭಾಸ್ಕರ್ ಎಸ್.ಕೋಟ್ಯಾನ್, ರುಕ್ಕಯ್ಯ ಪೂಜಾರಿ ಅಳಿಯೂರು ಮತ್ತು ಗೋಪಾಲ ಪೂಜಾರಿ ಮಾರೂರು ಅವರನ್ನು ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net