ಗ್ರಾಮದಲ್ಲಿಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ

ಪಾಂಡೇಶ್ವರ ಗ್ರಾಪಂ ಸಭಾಂಗಣದಲ್ಲಿ ವಿಶೇಷ ಗ್ರಾಮಸಭೆಯಲ್ಲಿ ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರಾಘವೇಂದ್ರ ರಾವ್ ಮಾತನಾಡಿದರು. ಗ್ರಾಮಾಡಳಿತಾಧಿಕಾರಿ ಐರಿನ್ ಶಾಂತಿ ಫೇರೆರಾ, ಪಿಡಿಒ ವಂದನಾ ಉಪಸ್ಥಿತರಿದ್ದರು.
ಪಾಂಡೇಶ್ವರ ಗ್ರಾಪಂ ಸಭಾಂಗಣದಲ್ಲಿ ವಿಶೇಷ ಗ್ರಾಮಸಭೆಯಲ್ಲಿ ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರಾಘವೇಂದ್ರ ರಾವ್ ಮಾತನಾಡಿದರು. ಗ್ರಾಮಾಡಳಿತಾಧಿಕಾರಿ ಐರಿನ್ ಶಾಂತಿ ಫೇರೆರಾ, ಪಿಡಿಒ ವಂದನಾ ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕೋಟ
ಪಾಂಡೇಶ್ವರ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶು ಆಸ್ಪತ್ರೆ ನೀಡಬೇಕು ಎಂಬ ಆಗ್ರಹ ಪಾಂಡೇಶ್ವರ ಗ್ರಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶೇಷ ಗ್ರಾಮಸಭೆಯಲ್ಲಿ ಕೇಳಿಬಂತು.
ಆಡಳಿತ ಅಧಿಕಾರಿ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸೂರಜ್ ಅಧ್ಯಕ್ಷತೆ ವಹಿಸಿದ್ದರು. ನಮ್ಮ ಗ್ರಾಮದಲ್ಲಿ ಈವರೆಗೆ ಸ್ಥಳೀಯವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶು ಆಸ್ಪತ್ರೆ ಇಲ್ಲವಾಗಿದೆ. ಈ ಬಗ್ಗೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಬೇಸಿಗೆ ತಾಪದಿಂದ ಕುಡಿಯುವ ನೀರಿನ ಅಭಾವ ತಪ್ಪಿಸಲು ಕೈಗೊಂಡ ಕ್ರಮ, ಜಲಜೀವನ್ ಯೋಜನೆ ನೀರಿನ ಸಮಸ್ಯೆ, ಪರಿಶಿಷ್ಟ ಪಂಗಡದ ಕೆಲ ಮಕ್ಕಳು ವಿದ್ಯಾಭ್ಯಾಸ ಮೊಟಕುಗೊಳಿತ್ತಿರುವ ಬಗ್ಗೆ ಸ್ಥಳೀಯಾಡಳಿತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಕ್ರಮ, ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಸಂಬಂಧಿಸಿದ ವೈದ್ಯರನ್ನು ವರ್ಗಾಯಿಸಿ ಅಲ್ಲಿ ಹೆರಿಗೆ ಕೇಂದ್ರ ಮುಚ್ಚಿದ್ದು ಇದರಿಂದ ಕೋಟ ಹೋಬಳಿ ಭಾಗದ ಬಡ ವರ್ಗದವರು ಹಾಗೂ ಫಲಾನುಭವಿಗಳು ವಂಚಿತರಾಗಿ ದೂರದ ತಾಲೂಕು ಜಿಲ್ಲಾಸ್ಪತ್ರೆಗೆ ಹೋಗುವಂತಾಗಿದ್ದು, ವೈದ್ಯರನ್ನು ಮರುನೇಮಕಗೊಳಿಸುವ ಕುರಿತು ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಲಾಯಿತು.
ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರಾಘವೇಂದ್ರ ರಾವ್ ಆರೋಗ್ಯ ರಕ್ಷಣೆ ಕುರಿತು ಮಾಹಿತಿ ನೀಡಿದರು. ಕ್ಷಯ ಮುಕ್ತ ಗ್ರಾಪಂ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ವೈದ್ಯಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಬ್ರಹ್ಮಾವರ ತಾಲೂಕಿನ ಅಧಿಕಾರಿ ಭಾಗೀರಥಿ ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಮಾಡಳಿತಾಧಿಕಾರಿ ಐರಿನ್ ಶಾಂತಿ ಫೇರೆರಾ ಉಪಸ್ಥಿತರಿದ್ದರು. ಪಿಡಿಒ ವಂದನಾ ಸ್ವಾಗತಿಸಿದರು. ಪಂಚಾಯಿತಿ ಕಾರ್ಯದರ್ಶಿ ವಿಜಯ ಭಂಡಾರಿ ನಿರ್ವಹಿಸಿದರು.

ಪರಿಸರ ಸ್ವಚ್ಛತೆ ಜಾಗೃತಿ

ಸಾಸ್ತಾನ ಟೋಲ್ ಸುತ್ತಮುತ್ತ ಹಾಗೂ ಪಂಚಾಯಿತಿ ವ್ಯಾಪ್ತಿಯ ಕೆಲ ಅಂಗಡಿ ಮುಂಗಟ್ಟುಗಳ ಆಸುಪಾಸು ಕಸ ಹಾಗೂ ಎಳನೀರಿನ ಅವಶೇಷಗಳ ರಾಶಿಯಿಂದ ಪರಿಸರ ಮಲಿನಗೊಳ್ಳುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಟೋಲ್ ಹಾಗೂ ಅಂಗಡಿ ಮುಂಗಟ್ಟುಗಳಿಗೆ ನೋಟಿಸ್ ಮೂಲಕ ಜಾಗೃತಿ ಮೂಡಿಸಿ ಎಂದು ಸ್ಥಳೀಯರು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net