ಕರೊನಾ ಅವಧಿಯಲ್ಲಿ ಸಾಯ, ಚವರ್ಕಾಡು ಜನತೆ ಎದುರಿಸಿದ್ದ ಸಮಸ್ಯೆ ಅಷ್ಟಿಷ್ಟಲ್ಲ. ಇಲ್ಲಿನ ಜನತೆಗೆ ಮಳೆಗಾಲದಲ್ಲಿ ಬಾಕಿಲಪದವು ಹೊಳೆ ದಾಟಿ ತೆರಳಲಾಗದೆ, ಸಾರಡ್ಕ ಗೇಟ್ ಮೂಲಕ ಸಾಗಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತು. ಅಂದು ಕೋವಿಡ್ ಹಿನ್ನೆಲೆ ಅಂತಾರಾಜ್ಯ ಗಡಿಪ್ರದೇಶ ಸಾರಡ್ಕ ಗೇಟನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಇದರಿಂದ ಚವರ್ಕಾಡು-ಸಾಯ ಪ್ರದೇಶದ ಜನತೆ ಪ್ರಾಯಶಃ ದ್ವೀಪಸದೃಶ ಜೀವನ ನಡೆಸುವಂತಾಗಿತ್ತು. ಇಲ್ಲಿನ ಜನತೆಗೆ ರೇಶನ್, ಅಂಚೆ, ಬ್ಯಾಂಕ್, ಪಂಚಾಯಿತಿ ಸೇರಿದಂತೆ ಪ್ರತಿಯೊಂದು ಸರ್ಕಾರಿ ಸವಲತ್ತಿಗೆ ಪೆರ್ಲ ಪೇಟೆಯನ್ನು ಆಶ್ರಯಿಸಬೇಕಾಗಿದ್ದು, ಕರೊನಾ ಕಾಲಘಟ್ಟದಲ್ಲಿ ಹೆಚ್ಚಿನ ಸಂಕಷ್ಟ ಅನುಭವಿಸಿದ್ದರು.