ದೇವಳದೊಳಗೆ ಬೇಡ ವಿಕೃತ ಮನಸ್ಸಿನ ಲವಲೇಶ

ಆದ್ಯಪಾಡಿ ದೈವಂಗಳಗುಡ್ಡೆಯ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದಲ್ಲಿ ಭಾನುವಾರ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಪ್ರಯುಕ್ತ ಧಾರ್ಮಿಕ ಸಭೆ ನಡೆಯಿತು. ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ, ಅಜಿತ್ ಕುಮಾರ್ ರೈ ಮಾಲಾಡಿ ಮೊದಲಾದವರಿದ್ದರು.
ಆದ್ಯಪಾಡಿ ದೈವಂಗಳಗುಡ್ಡೆಯ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದಲ್ಲಿ ಭಾನುವಾರ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಪ್ರಯುಕ್ತ ಧಾರ್ಮಿಕ ಸಭೆ ನಡೆಯಿತು. ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ, ಅಜಿತ್ ಕುಮಾರ್ ರೈ ಮಾಲಾಡಿ ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಗುರುಪುರ
ದೇವಸ್ಥಾನವೆಂದರೆ ಅದು ಪುಣ್ಯಸಂಚಯದ ಕ್ಷೇತ್ರ. ಅದರೊಳಗೆ ಪ್ರವೇಶಿಸುವ ವ್ಯಕ್ತಿಯಲ್ಲಿ(ಭಕ್ತರಲ್ಲಿ) ಜಾತಿ-ಧರ್ಮ-ರಾಜಕೀಯ ಮತ್ತು ವಿಕೃತ ಮನಸ್ಸಿನ ಲವಲೇಶವೂ ಇರಕೂಡದು. ಪುಣ್ಯಕ್ಷೇತ್ರಗಳು ಸಾಮರಸ್ಯದ ಕೇಂದ್ರಗಳಾಗಬೇಕು. ಸನಾತನ ಹಿಂದೂ ಧರ್ಮ ಉಳಿಸುವ ಕೆಲಸಗಳಾಗಬೇಕು ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದರು.
ಆದ್ಯಪಾಡಿ ದೈವಂಗಳಗುಡ್ಡೆಯ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದಲ್ಲಿ ಭಾನುವಾರ ಆರಂಭಗೊಂಡ ಅಷ್ಟಬಂಧ ಬ್ರಹ್ಮಕಲಶಾಭಿಷೇಕ, ರುದ್ರಯಾಗ ಹಾಗೂ ಸಹಸ್ರನಾಳಿಕೇರ ಮಹಾಗಣಪತಿ ಹೋಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ವೆಂಕಟರಮಣ ಆಸ್ರಣ್ಣ ಮತ್ತು ಕಮಲಾದೇವಿ ಪ್ರಸಾದ ಆಸ್ರಣ್ಣ, ಶಾಸಕ ಡಾ.ಭರತ್ ಶೆಟ್ಟಿ, ಗುತ್ತಿನ ಗಡಿಕಾರರ ಪರವಾಗಿ ದೋಣಿಂಜೆಗುತ್ತು ಪ್ರಮೋದ್ ಕುಮಾರ್ ರೈ ಮಾತನಾಡಿದರು. ಶ್ರೀ ಶರವು ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಅಡ್ಯಾರುಕಟ್ಟೆ ಸ್ವಾಗತಿಸಿದರು. ಶೆಡ್ಡೆ ವಸಂತಿ ಸಿ.ಶೆಟ್ಟಿ ಅವರಿಗೆ ಗೌರವ ಸಲ್ಲಿಸಲಾಯಿತು. ಆಡಳಿತ ಮೊಕ್ತೇಸರ ಎ.ಮಂಜುನಾಥ ಭಂಡಾರಿ ಶೆಡ್ಡೆ, ಎ.ರಾಜೇಂದ್ರ ಶೆಟ್ಟಿ, ಶ್ರೀಪತಿ ಭಟ್, ಶಾನಾಡಿ ಅಜಿತ್ ಹೆಗ್ಡೆ, ಪ್ರದೀಪ್ ಕುಮಾರ್ ಕಲ್ಕೂರ, ವೇಣುಗೋಪಾಲ ಅರಸ, ಕೃಷ್ಣ ಶೆಟ್ಟಿ, ಜಗನ್ನಾಥ ಅತ್ತಾರ್, ಶ್ರೀಧರ ಶೆಟ್ಟಿ ಯಾನೆ ಚೆನ್ನಯ ಮಾಡ, ಲಕ್ಷ್ಮಣ ಚೌಟ, ನಾಗೇಶ್ ಶೆಟ್ಟಿ, ನಿತಿನ್ ಶೆಟ್ಟಿ, ಮಂಜು ಕಾವ, ಯತಿರಾಜ ಆಳ್ವ, ಎಂ.ರತ್ನಾಕರ ಶೆಟ್ಟಿ, ಬಡಾಜೆ ರವಿಶಂಕರ್ ಶೆಟ್ಟಿ, ಅನಿಲ್ ಬಲ್ಲಾಳ್, ಭುಜಂಗ ಶೆಟ್ಟಿ ಜೆಪ್ಪು ಗುಡ್ಡೆಗುತ್ತು, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ಸಂಘ-ಸಂಸ್ಥೆಗಳ ಪ್ರಮುಖರು, ಕಾರ್ಯಕರ್ತರು, ಭಕ್ತರು ಇದ್ದರು. ಸಾಯಿನಾಥ ಶೆಟ್ಟಿ ಮುಂಡ್ಕೂರು ನಿರೂಪಿಸಿದರು. ದಿವಾಕರ ಸಾಮಾನಿ ವಂದಿಸಿದರು.
ಬೆಳಗ್ಗೆ ತೋರಣ ಮುಹೂರ್ತ ಮತ್ತು ಉಗ್ರಾಣ ಮುಹೂರ್ತ ನಡೆಯಿತು. ಸಂಜೆ ಕೈಕಂಬದ ಧೂಮಾವತಿ ದ್ವಾರ ಹಾಗೂ ಪೊರ್ಕೋಡಿ ದ್ವಾರದ ಮೂಲಕ ದೇವಸ್ಥಾನಕ್ಕೆ ಭವ್ಯ ಹಸಿರು ಹೊರೆಕಾಣಿಕೆ ಮೆರವಣಿಗೆ ಸಾಗಿ ಬಂತು. ರಾತ್ರಿ ಶ್ರೀ ಕ್ಷೇತ್ರ ಕಟೀಲು ಮೇಳದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

ದೇವರ ಅನುಗ್ರಹದಿಂದ ಇಲ್ಲಿ 5ನೇ ಬಾರಿ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ದೇವಳದ ಆಡಳಿತ ಮೊಕ್ತೇಸರ, ಧಾರ್ಮಿಕ ಮುಖಂಡ ಮಂಜುನಾಥ ಭಂಡಾರಿ ಮುಂದಾಳತ್ವದಲ್ಲಿ ದೇವರಿಗೆ 4ನೇ ಬಾರಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ನಡೆಯುತ್ತಿದೆ ಎಂಬುದು ಸಂತೋಷದ ಸಂಗತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net