ತ್ರಾಸಿಯಲ್ಲಿಲ್ಲ ಆಟೋ ನಿಲ್ದಾಣ!

ಚತುಷ್ಪಥ ಕಾಮಗಾರಿಯಿಂದ ಅತಂತ್ರ
 ತ್ರಾಸಿ ಬಸ್ ನಿಲ್ದಾಣದ ಸಮೀಪ ಆಟೋ ರಿಕ್ಷಾಗಳನ್ನು ನಿಲ್ಲಿಸಿರುವುದು.
ತ್ರಾಸಿ ಬಸ್ ನಿಲ್ದಾಣದ ಸಮೀಪ ಆಟೋ ರಿಕ್ಷಾಗಳನ್ನು ನಿಲ್ಲಿಸಿರುವುದು.
Published on: 

ರಾಘವೇಂದ್ರ ಪೈ ಗಂಗೊಳ್ಳಿ

ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯಿಂದ ಕುಂದಾಪುರ ತಾಲೂಕಿನ ಪ್ರಮುಖ ಸಂಪರ್ಕ ಪ್ರದೇಶವಾಗಿರುವ ತ್ರಾಸಿಯಲ್ಲಿ ಆಟೋ ರಿಕ್ಷಾ ಚಾಲಕರು ಸೂಕ್ತ ಆಟೋ ರಿಕ್ಷಾ ನಿಲ್ದಾಣ ಇಲ್ಲದೆ ಪರದಾಡುವ ಸ್ಥಿತಿ ನಿರ್ವಾಣಗೊಂಡಿದೆ.

ತ್ರಾಸಿ ಬಸ್ ನಿಲ್ದಾಣ ಪರಿಸರ ಸದಾ ಪ್ರಯಾಣಿಕರಿಂದ ತುಂಬಿರುತ್ತಿದ್ದು, ದಿನದ 24 ಗಂಟೆ ಈ ಪ್ರದೇಶದ ಜನಜಂಗುಳಿಯಿಂದ ಕೂಡಿರುತ್ತದೆ. ಗಂಗೊಳ್ಳಿ, ಗುಜ್ಜಾಡಿ, ತ್ರಾಸಿ, ಮರವಂತೆ, ಮುಳ್ಳಿಕಟ್ಟೆ, ಮೊವಾಡಿ, ಕಂಚುಗೋಡು ಮೊದಲಾದ ಪ್ರದೇಶಗಳ ಜನರಿಗೆ ತ್ರಾಸಿ ಸಂಪರ್ಕ ಕೇಂದ್ರವಾಗಿದ್ದು, ದೂರ ದೂರದ ಪ್ರದೇಶಗಳಿಗೆ ಪ್ರಯಾಣಿಸುವವರಿಗೆ ತ್ರಾಸಿ ಜಂಕ್ಷನ್ ಸಂಪರ್ಕ ಕೊಂಡಿ. 15-20 ವರ್ಷಗಳಿಂದ ತ್ರಾಸಿ ಬಸ್ ನಿಲ್ದಾಣದಲ್ಲಿ 45ಕ್ಕೂ ಮಿಕ್ಕಿ ಆಟೋ ರಿಕ್ಷಾಗಳು ಕಾರ್ಯನಿರ್ವಹಿಸುತ್ತಿದ್ದು, ಆಟೋ ರಿಕ್ಷಾ ನಿಲ್ಲಿಸಲು ಸೂಕ್ತ ಸ್ಥಳವಿಲ್ಲದೆ ಚಾಲಕರು ಪರದಾಡುತ್ತಿದ್ದಾರೆ. ಆಟೋ ರಿಕ್ಷಾವನ್ನೇ ನಂಬಿ ಜೀವನ ನಡೆಸುತ್ತಿರುವ ಬಡ ಕುಟುಂಬಗಳು ಆತಂಕದಲ್ಲಿ ಜೀವನ ಕಳೆಯುವ ಸ್ಥಿತಿ ನಿರ್ವಾಣವಾಗಿದೆ.

ಕುಂದಾಪುರದಿಂದ ಬೈಂದೂರು ತನಕ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಸಂದರ್ಭ ತ್ರಾಸಿ ಪ್ರದೇಶದಲ್ಲಿರುವ ಆಟೋ ರಿಕ್ಷಾ ನಿಲ್ದಾಣ ಚತುಷ್ಪಥ ಕಾಮಗಾರಿಗೆ ಬಲಿಯಾಗಿದೆ. ಚತುಷ್ಪಥ ಕಾಮಗಾರಿಗಾಗಿ ಆಟೋ ರಿಕ್ಷಾ ನಿಲ್ದಾಣವನ್ನು ಸ್ಥಳಾಂತರಿಸಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದ್ದ ಆಟೋ ರಿಕ್ಷಾ ಚಾಲಕರು ನಿಲ್ದಾಣವನ್ನು ರಸ್ತೆಯ ಇನ್ನೊಂದು ಬದಿಗೆ ಸ್ಥಳಾಂತರಿಸಿದರು. ಆದರೆ ಈ ಪ್ರದೇಶ ಕೂಡ ಚತುಷ್ಪಥ ಕಾಮಗಾರಿಗೆ ಒಳಪಡುತ್ತಿರುವ ಹಿನ್ನೆಲೆಯಲ್ಲಿ ಆಟೋ ಚಾಲಕರು ರಿಕ್ಷಾ ನಿಲ್ದಾಣವನ್ನು ಬದಲಾಯಿಸಬೇಕಾದ ಒತ್ತಡಕ್ಕೆ ಸಿಲುಕಿಕೊಂಡಿದ್ದಾರೆ. ಸದ್ಯ ತ್ರಾಸಿ ಬಸ್ ನಿಲ್ದಾಣ ಸಮೀಪ ಆಟೋ ರಿಕ್ಷಾಗಳನ್ನು ನಿಲ್ಲಿಸುತ್ತಿದ್ದು, ಯಾವಾಗ ಇಲ್ಲಿಂದ ಜಾಗ ಖಾಲಿ ವಾಡಬೇಕಾಗುತ್ತದೋ ಎಂಬ ಚಿಂತೆ ರಿಕ್ಷಾ ಚಾಲಕರನ್ನು ಕಾಡುತ್ತಿದೆ.

ಕೈತೊಳೆದುಕೊಂಡ ಸ್ಥಳೀಯಾಡಳಿತ!

ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ರಿಕ್ಷಾ ನಿಲ್ದಾಣಕ್ಕಾಗಿ ಸೂಕ್ತ ಸ್ಥಳ ಗುರುತಿಸಿಕೊಡುವಂತೆ ತ್ರಾಸಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದ್ದರೂ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಥಳೀಯಾಡಳಿತ ಕೈತೊಳೆದು ಕುಳಿತಿದೆ. ಹಲವಾರು ವರ್ಷಗಳಿಂದ ರಿಕ್ಷಾ ಚಾಲನೆ ವಾಡಿ ಜೀವನ ನಡೆಸುತ್ತಿದ್ದ ಕುಟುಂಬಗಳು ತ್ರಾಸಿ ರಿಕ್ಷಾ ನಿಲ್ದಾಣದ ಜಾಗದ ಸಮಸ್ಯೆಯಿಂದ ಆತಂಕಿತರಾಗಿದ್ದು, ಮುಂದೇನು ಎಂಬ ಚಿಂತೆ ಕಾಡುತ್ತಿದೆ. ಸಂಸದರು, ಶಾಸಕರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪ್ರಮುಖ ಸಂಪರ್ಕ ಕೇಂದ್ರವಾಗಿರುವ ತ್ರಾಸಿಯಲ್ಲಿ ಸೂಕ್ತ ಸ್ಥಳವನ್ನು ಆಟೋ ರಿಕ್ಷಾ ನಿಲ್ದಾಣಕ್ಕೆ ಒದಗಿಸಬೇಕು ಎಂಬ ಮನವಿ ಸಲ್ಲಿಸಿದ್ದರೂ ಈವರೆಗೆ ರಿಕ್ಷಾ ನಿಲ್ದಾಣಕ್ಕೆ ಜಾಗ ಗುರುತಿಸುವ ಪ್ರಕ್ರಿಯೆ ನಡೆದಿಲ್ಲ ಎಂಬ ಆರೋಪ ರಿಕ್ಷಾ ಚಾಲಕರಿಂದ ಕೇಳಿಬಂದಿದೆ.

ಮಳೆ, ಬಿಸಿಲಿನಲ್ಲೇ ದುಡಿಮೆ

ಬಹುತೇಕ ಕಡೆಗಳಲ್ಲಿ ಸುಸಜ್ಜಿತ ರಿಕ್ಷಾ ನಿಲ್ದಾಣ ನಿರ್ವಾಣಗೊಂಡಿದ್ದರೂ ಪ್ರಮುಖ ಪ್ರದೇಶವಾಗಿರುವ ತ್ರಾಸಿಯಲ್ಲಿ ವಾತ್ರ ಅಧಿಕೃತ ರಿಕ್ಷಾ ನಿಲ್ದಾಣ ಇಲ್ಲ. ಮಳೆ, ಬಿಸಿಲು ಲೆಕ್ಕಿಸದೆ ತ್ರಾಸಿ ಬಸ್ ನಿಲ್ದಾಣದಲ್ಲಿ ತಮ್ಮ ಹೊಟ್ಟೆಪಾಡಿಗಾಗಿ ದುಡಿಯುವ ರಿಕ್ಷಾ ಚಾಲಕರಿಗೆ ಸೂಕ್ತ ರಿಕ್ಷಾ ನಿಲ್ದಾಣ ನಿರ್ಮಿಸುವಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜನಪ್ರತಿನಿಧಿಗಳು ಗಮನಹರಿಸಬೇಕಿದೆ ಎಂಬ ಆಗ್ರಹ ಕೇಳಿಬಂದಿದೆ.

ಪ್ರಮುಖ ಸಂಪರ್ಕ ಕೇಂದ್ರವಾಗಿರುವ ತ್ರಾಸಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದ ಆಟೋ ಚಾಲಕರು ಬೀದಿಗೆ ಬರುವಂತಾಗಿದ್ದು, ಆಟೋ ಚಾಲಕರು ಸೂಕ್ತ ನಿಲ್ದಾಣವಿಲ್ಲದೆ ಅತಂತ್ರರಾಗಿದ್ದಾರೆ. ತ್ರಾಸಿ ಬಸ್ ನಿಲ್ದಾಣದಲ್ಲಿ ರಿಕ್ಷಾ ನಿಲ್ದಾಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಆಟೋ ಚಾಲಕರ ಕುಟುಂಬಗಳಿಗೆ ಭದ್ರತೆ ಒದಗಿಸಬೇಕು.
ಉದಯ ಖಾರ್ವಿ ತ್ರಾಸಿ ಆಟೋ ಚಾಲಕ