ಅನಿವಾಸಿ ಭಾರತೀಯನ ಮನೆಯಲ್ಲಿ ಕಳ್ಳತನ

Theft
Theft
Published on
ಕಾಸರಗೋಡು: ನೆಲ್ಲಿಕುಂಜೆಯ ಅನಿವಾಸಿ ಭಾರತೀಯರೊಬ್ಬರ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಲೈಟ್‌ಹೌಸ್ ಬಳಿಯ ಮೋಹನ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು ಕುಟುಂಬ ಪ್ರಸ್ತುತ ವಿದೇಶದಲ್ಲಿ ವಾಸಿಸುತ್ತಿದೆ.
ಮಂಗಳವಾರ ಬೆಳಗ್ಗೆ ಮೋಹನನ್ ಅವರ ಪತ್ನಿಯ ಅತ್ತೆ ಮನೆಗೆ ಬಂದಾಗ ಮುಂಬಾಗಿಲು ಮುರಿದಿತ್ತು. ನೆರೆಹೊರೆಯವರಿಗೆ ವಿಷಯ ತಿಳಿಸಿ ಒಳಹೋಗಿ ಪರಿಶೀಲಿಸಿದಾಗ ಎಲ್ಲ ಕಪಾಟುಗಳನ್ನು ಮುರಿದು ಹಾಕಲಾಗಿದ್ದು ಬಟ್ಟೆಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದವು. ಚಿನ್ನಾಭರಣ, ಹಣಕ್ಕಾಗಿ ಕಳ್ಳರು ಹುಡುಕಾಡಿರುವುದು ತಿಳಿದುಬಂದಿದೆ. ಏನೇನು ಕಳವಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಗಲ್ಫ್‌ನಲ್ಲಿರುವ ಕುಟುಂಬ ಮನೆಗೆ ಹಿಂತಿರುಗಿದ ಬಳಿಕ ಕಳೆದುಹೋದ ವಸ್ತುಗಳ ವಿವರ ಲಭ್ಯವಾಗಬೇಕಿದೆ. ಕಾಸರಗೋಡು ನಗರ ಪೊಲೀಸರು ಸ್ಥಳ ಪರಿಶೀಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net