ನಿಮಿಶಾ ಹಾಗೂ ಅವರ ಗಂಡ ಪ್ರಜೋಶ್ ಅವರು ಜುಲೈ 5 ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಬಂದಿದ್ದರು. ಬೆಳಗ್ಗೆ ಸುಮಾರು 8:20ರ ವೇಳೆಗೆ ದೇವಸ್ಥಾನದ ಒಳಗೆ ದರ್ಶನ ಮುಗಿಸಿ ಹೊರಾಂಗಣಕ್ಕೆ ಬಂದಾಗ, ನಿಮಿಶಾ ಅವರು ತಮ್ಮ ಕಂದು ಬಣ್ಣದ ವ್ಯಾನಿಟಿ ಬ್ಯಾಗ್ನ ಜಿಪ್ ತೆರೆದಿರುವುದನ್ನು ಗಮನಿಸಿದ್ದಾರೆ. ತಕ್ಷಣ ಒಳಗೆ ಪರಿಶೀಲಿಸಿದಾಗ 80,000 ನಗದು ಹಣವಿದ್ದ ಪರ್ಸ್ ನಾಪತ್ತೆಯಾಗಿತ್ತು. ದೇವಸ್ಥಾನದ ಪರಿಸರದಲ್ಲಿ ಹುಡುಕಾಡಿದರೂ ಪರ್ಸ್ ಸಿಗದಿದ್ದಾಗ, ಅವರು ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.