

ನಾನೂ ಸಹ ವಿಶ್ವದ ಓರ್ವ ಸಂವೇದನಾಶೀಲ ಪ್ರಜೆಯಾಗಿದ್ದೇನೆ. ಒಂದು ತಿಂಗಳಿನಿಂದ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧ ಹಾಗೂ ಸಂಬಂಧಿತ ಘಟನೆಗಳಿಂದ ನೊಂದಿದ್ದೇನೆ. ಮಾನವ ಜನಾಂಗದ ಮೇಲೆ ನಡೆಯುತ್ತಿರುವ ಹಿಂಸೆಗಳಿಗೆ ಮತ್ತು ಪ್ರಕೃತಿಯ ಮೇಲೆ ಆಗುತ್ತಿರುವ ದಬ್ಬಾಳಿಕೆ ಖಂಡಿಸಿ ನೈತಿಕ ಪ್ರತಿಭಟನೆ ಮಾಡುತ್ತಿದ್ದೇನೆ. ಮಹಾತ್ಮ ಗಾಂಧಿ ಮಾದರಿಯಲ್ಲಿ ಮೌನ ಧರಣಿ ಹಮ್ಮಿಕೊಂಡಿದ್ದೇನೆ. ಜನಜಾಗೃತಿ ಮೂಡಿಸುವುದು ನನ್ನ ಉದ್ದೇಶ.