ಪವಿತ್ರ ಗ್ರಂಥದಲ್ಲಿನ ದೇವರ ವಾಕ್ಯಗಳು ನಿಶ್ಚಿತ

 ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ತೆರಾಲಿ ಜಾತ್ರೆ ಜರುಗಿತು.
ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ತೆರಾಲಿ ಜಾತ್ರೆ ಜರುಗಿತು.
Published on
ಕುಂದಾಪುರ: ಈ ಪ್ರಪಂಚದಲ್ಲಿ ಎಲ್ಲವೂ ಅನಿಶ್ಚಿತ. ಆದರೆ ಪವಿತ್ರ ಗ್ರಂಥದಲ್ಲಿ ಬರೆದ ದೇವರ ವಾಕ್ಯಗಳು ಮಾತ್ರ ನಿಶ್ಚಿತವಾಗಿದೆ. ಈ ಪ್ರಪಂಚ ನಶಿಸಿದರೂ, ದೇವರ ವಾಕ್ಯಗಳು ಮಾತ್ರ ನಶಿಸುವುದಿಲ್ಲ. ಜೇನು ನೊಣಗಳು ಹೂವುಗಳಿಂದ ಜೇನು ಹೀರಿ ಗೂಡು ಕಟ್ಟುವ ಹಾಗೆ ನಾವು ದೇವರ ವಾಕ್ಯಗಳನ್ನು ಹೀರಿಕೊಂಡು ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂದು ಬಸ್ರೂರು ಫಿಲಿಪ್ ನೇರಿ ಸಿಬಿಎಸ್‌ಸಿ ಶಾಲೆಯ ಪ್ರಾಂಶುಪಾಲ ಡ್ಯಾನ್ಸಿ ವಾರ್ಟಿಸ್ ಹೇಳಿದರು.
ಕುಂದಾಪುರ ರೊಜಾರಿ ಮಾತೆ ಇಗರ್ಜಿಯಲ್ಲಿ ಮಂಗಳವಾರ ನಡೆದ ತೆರಾಲಿ ಜಾತ್ರೆಯ ಪೂಜಾ ವಿಧಿಯನ್ನು ನೆರವೇರಿಸಿ ಮಾತನಾಡಿದರು.
ಕುಂದಾಪುರ ಇಗರ್ಜಿಯ ಧರ್ಮಗುರು ಪಾವ್ಲ್ ರೇಗೊ, ಸಂತ ಜುಜೆ ವಾಜ್ ಇವರಿಗೆ ಸಮರ್ಪಿಲ್ಪಟ್ಟ ಕುಂದಾಪುರ ವಲಯದ, ಎಲ್ಲ ಇಗರ್ಜಿಗಳ ಧರ್ಮಗುರುಗಳು, ಕಟ್ಕರೆ ಬಾಲ ಯೇಸು ಆಶ್ರಮದ ಧರ್ಮಗುರುಗಳು, ಡಾನ್ ಬಾಸ್ಕೊ ಸಂಸ್ಥೆಯ ಧರ್ಮಗುರುಗಳು, ಕೆರೆಕಟ್ಟೆ ಪುಣ್ಯಕ್ಷೇತ್ರದ ರೆಕ್ಟರ್ ಹಾಗೂ ಅತಿಥಿ ಧರ್ಮಗುರುಗಳು ಈ ಪೂಜಾವಿಧಿಯಲ್ಲಿ ಪಾಲ್ಗೊಂಡರು.
ಕುಂದಾಪುರ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ, ಇಗರ್ಜಿಯ ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಧರ್ಮಭಗಿನಿಯರು, ಪಾಲನ ಮಂಡಳಿ ಸದಸ್ಯರು, ಗುರಿಕಾರರು, ಚರ್ಚಿನ ಸದಸ್ಯರು ಹಾಗೂ ಜಾತಿ ಧರ್ಮ ಭೇದ ಭಾವ ಮರೆತು ಜನರು ಆಗಮಿಸಿ ಭಾವೈಕತೆ ಮೆರೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net