

ಪುತ್ತೂರು ಗ್ರಾಮಾಂತರ: ಕೊಳ್ತಿಗೆ ಗ್ರಾಮದ ಕರ್ತಡ್ಕ ವ್ಯಾಪ್ತಿಯಲ್ಲಿ ವಾರದ ಬಳಿಕ ಮತ್ತೆ ಕಾಡಾನೆ ಲಗ್ಗೆಯಿಟ್ಟು ಅಪಾರ ಪ್ರಮಾಣದ ಕೃಷಿ ಹಾನಿ ಮಾಡಿದೆ. ಕರ್ತಡ್ಕ ವ್ಯಾಪ್ತಿಗೆ ವಾರದ ಹಿಂದೆ ಐದಾರು ಆನೆಗಳಿದ್ದ ಗುಂಪು ಲಗ್ಗೆಯಿಟ್ಟು ಕೃಷಿ ಹಾನಿ ಮಾಡಿತ್ತು.
ಗುರುವಾರ ರಾತ್ರಿ ಒಂಟಿ ಕಾಡನೆಯೊಂದು ಈ ಭಾಗದ ಕೃಷಿಕರ ತೋಟಗಳಿಗೆ ಲಗ್ಗೆಯಿಟ್ಟು ಅಪಾರ ಅಪಾರ ಬಾಳೆಗಿಡ, ಒಂದು ತೆಂಗಿನ ಮರ, 5 ದೀವಿಹಲಸು ಮರ ಮತ್ತು 3 ಈಚಲು ಮರ ಹಾನಿಗೊಳಿಸಿದೆ.