_1772632422579.webp?w=480&auto=format%2Ccompress&fit=max)
_1772632422579.webp?w=480&auto=format%2Ccompress&fit=max)
ಯಾಂತ್ರಿಕ ಉಳುಮೆ, ಮಿಶ್ರ ಬೆಳೆಯ ಮೂಲಕ ಕಟಾವು ಮಾಡುವ ಸಮಯದಲ್ಲಿ ಹೊರ ರಾಜ್ಯಗಳಿಂದ ಬರುವ ಬೃಹತ್ ಯಂತ್ರಗಳಲ್ಲಿರುವ ಕಳೆ ಬೀಜಗಳು ನಮ್ಮ ಮಣ್ಣಿಗೆ ಸೇರಿಕೊಳ್ಳುವುದೇ ಕಳೆ ಸಮಸ್ಯೆಗೆ ಕಾರಣ. ಗದ್ದೆಗೆ ಹಾಕುವ ಕೆಲ ಗೊಬ್ಬರ ಕೂಡ ಕಳೆ ಗಿಡ ಬೆಳೆಯಲು ಕಾರಣವಾಗುತ್ತಿದೆ.
ಎರಡು ಎಕರೆ ಪ್ರದೇಶದಲ್ಲಿ ಪ್ರತಿ ವರ್ಷದಂತೆ ಸುಗ್ಗಿ ಬಿತ್ತನೆ ಮಾಡಿದ್ದು, ಗದ್ದೆಗಳಲ್ಲಿ ಸಂಪೂರ್ಣ ಕಳೆಗಿಡಗಳೇ ತುಂಬಿ ಪೈರನ್ನು ನಾಶಪಡಿಸಿವೆ. ಈ ಕಾರಣದಿಂದ ನಿಗದಿತ ಸಮಯಕ್ಕೆ ಮೊದಲು ಗದ್ದೆ ಕಟಾವು ಮಾಡಲಾಗಿದೆ. ಸಾಮಾನ್ಯವಾಗಿ 30 ಕ್ವಿಂಟಾಲ್‌ಗಿಂತ ಅಧಿಕ ಭತ್ತ ಸಿಗುತ್ತಿತ್ತು. ಈ ಬಾರಿ ಯಾವುದೇ ಫಸಲು ಸಿಕ್ಕಿಲ್ಲ. ಬೆಳೆ ಬೈ ಹುಲ್ಲಿಗಷ್ಟೇ ಸೀಮಿತವಾಗಿದೆ.
ಗಂಡು ಭತ್ತವು ಭತ್ತದ ಪೈರನ್ನೇ ಹೋಲುವ ಅಪಾಯಕಾರಿ ಕಳೆಯಾಗಿದೆ. ತೆನೆ ಬರುವವರೆಗೂ ಇದು ಪತ್ತೆಯಾಗುವುದಿಲ್ಲ. ಈ ಕಳೆಯನ್ನು ಗುರುತಿಸಿ ಕೈಯಿಂದ ಕಿತ್ತು ಹಾಕುವುದು ಅತ್ಯುತ್ತಮ ನಿರ್ವಹಣಾ ವಿಧಾನ. ಕೆಲವೊಂದು ಕಳೆಗಳಿಗೆ ಪ್ರಾಥಮಿಕ ಹಂತದಲ್ಲಿ ಅಗತ್ಯ ಸಿಂಪಡಣೆಗಳನ್ನು ಕೈಗೊಳ್ಳಬಹುದು.