ಕಂಬಳದಿಂದ ಗ್ರಾಮದ ಕೀರ್ತಿ ಇನ್ನಷ್ಟು ಎತ್ತರಕ್ಕೆ

 ಸೂರ್ಯ-ಚಂದ್ರ’ ಜೋಡುಕರೆ ಕಂಬಳದ ಆಮಂತ್ರಣ ಪತ್ರ ಬಿಡುಗಡೆಗೊಳಿಸಲಾಯಿತು. ಬಿ.ಸಿ.ರೋಡು ಚಂಡಿಕಾ ಪರಮೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ಲೋಕನಾಥ ಶೆಟ್ಟಿ ಬಿ.ಸಿ.ರೋಡು, ರೋಟರಿ ಜಿಲ್ಲೆ 3080 ಚುನಾಯಿತ ಗವರ್ನರ್ ಸೋಮಶೇಖರ್, ಕಂಬಳ ಸಮಿತಿ ಗೌರವಾಧ್ಯಕ್ಷ ಮೋಹನ್‌ದಾಸ್ ರೈ ದೆಬ್ಬೇಲಿಗುತ್ತು ಮತ್ತಿತರರು ಉಪಸ್ಥಿತರಿದ್ದರು.
ಸೂರ್ಯ-ಚಂದ್ರ’ ಜೋಡುಕರೆ ಕಂಬಳದ ಆಮಂತ್ರಣ ಪತ್ರ ಬಿಡುಗಡೆಗೊಳಿಸಲಾಯಿತು. ಬಿ.ಸಿ.ರೋಡು ಚಂಡಿಕಾ ಪರಮೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ಲೋಕನಾಥ ಶೆಟ್ಟಿ ಬಿ.ಸಿ.ರೋಡು, ರೋಟರಿ ಜಿಲ್ಲೆ 3080 ಚುನಾಯಿತ ಗವರ್ನರ್ ಸೋಮಶೇಖರ್, ಕಂಬಳ ಸಮಿತಿ ಗೌರವಾಧ್ಯಕ್ಷ ಮೋಹನ್‌ದಾಸ್ ರೈ ದೆಬ್ಬೇಲಿಗುತ್ತು ಮತ್ತಿತರರು ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಹಿಂದೆ ಹರೇಕಳ ಮೆಣಸು, ಅಚ್ಚುಬೆಲ್ಲಕ್ಕೆ ಭಾರೀ ಇದ್ದರೆ ಪ್ರಸ್ತುತ ಹಾಜಬ್ಬರಿಂದಲೂ ಕೀರ್ತಿ ಹೆಚ್ಚಿದೆ. ಕಂಬಳದಿಂದ ಗ್ರಾಮದ ಕೀರ್ತಿ ಇನ್ನಷ್ಟು ಎತ್ತರಕ್ಕೇರಲಿದೆ. ಹಿಂದೆ ನಡೆಯುತ್ತಿದ್ದ ಕಂಬಳ ನಿಂತು ಹೋಗಿವೆ. ಪ್ರಸ್ತುತ ನಡೆಯುತ್ತಿರುವ 25 ಕಂಬಳಗಳ ಪೈಕಿ 22 ಹೊಸ ಕಂಬಳ ಆಗಿ ಹಿಂದಿನ ಛಾಪು ಮರುಕಳಿಸುವಂತೆ ಮಾಡಿದೆ ಎಂದು ಬಿ.ಸಿ.ರೋಡು ಚಂಡಿಕಾ ಪರಮೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ಲೋಕನಾಥ ಶೆಟ್ಟಿ ಬಿ.ಸಿ.ರೋಡು ಅಭಿಪ್ರಾಯಪಟ್ಟರು.
ಹರೇಕಳ ಸೂರ್ಯ-ಚಂದ್ರ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ ಹರೇಕಳ ಉಳಿದೊಟ್ಟು ಮುಗೇರಮಾರುಗದ್ದೆಯಲ್ಲಿ ಏ.18ರಂದು ನಡೆಯಲಿರುವ ಪ್ರಥಮ ವರ್ಷದ ಸೂರ್ಯ-ಚಂದ್ರ ಜೋಡುಕರೆ ‘ಹರೇಕಳ ಕಂಬಳ’ದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ ಭಾನುವಾರ ಅಸೈಗೋಳಿ ಬಂಟರ ಭವನದಲ್ಲಿ ನಡೆಯಿತು.
ರೋಟರಿ ಜಿಲ್ಲೆ 3181 ಚುನಾಯಿತ ಗವರ್ನರ್ ಸೋಮಶೇಖರ್ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಮಾಜಿ ಸದಸ್ಯ ಕೆ.ಟಿ.ಸುವರ್ಣ, ದ.ಕ.-ಉಡುಪಿ ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಪ್ರಶಾಂತ್ ಗಟ್ಟಿ ಬೋಳಿಯಾರ್, ಕುತ್ತಾರ್ ಕೊರಗತನಿಯ ಆದಿಕ್ಷೇತ್ರದ ಟ್ರಸ್ಟಿ ಮಹಾಬಲ ಹೆಗ್ಡೆ ಮಾಗಣ್ತಡಿಗುತ್ತು, ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಮಂಜನಾಡಿ ಮಲರಾಯ ಬಂಟ ದೈವಸ್ಥಾನ ಆಡಳಿತ ಮೊಕ್ತೇಸರ ರಾಮದಾಸ್ ಆಳ್ವ ತೇವುನಾಡುಗುತ್ತು, ಕಂಬಳ ಸಮಿತಿ ಕಾರ್ಯಾಧ್ಯಕ್ಷ ಮೋಹನ್ ದಾಸ್ ಶೆಟ್ಟಿ ಉಳಿದೊಟ್ಟು, ಕಂಬಳ ಸಮಿತಿ ಗೌರವಾಧ್ಯಕ್ಷ ಮೋಹನ್ ದಾಸ್ ರೈ ದೆಬ್ಬೇಲಿಗುತ್ತು, ಚಿಲಿಂಬಿ ಬಾಲಕರ ಶಾರದೋತ್ಸವ ಸಮಿತಿ ಸ್ಥಾಪಕಾಧ್ಯಕ್ಷ ಸುಬ್ರಾಯ ನಾಯಕ, ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಸಂಚಾಲಕ ರವೀಂದ್ರ ರೈ ಕಲ್ಲಿಮಾರ್ ವಂದಿಸಿದರು. ಭಾಗ್ಯರಾಜ್ ಶೆಟ್ಟಿ ಹರೇಕಳ ನಿರೂಪಿಸಿದರು.

ಮೂರು ಗ್ರಾಮ ಒಂದು ಮಾಗಣೆಯಲ್ಲಿ ಪ್ರಥಮ ಬಾರಿಗೆ ಕಂಬಳ ಆಯೋಜಿಸಲಾಗಿದ್ದು, ಯಶಸ್ಸಿಗಾಗಿ ಉಳ್ಳಾಲ ಕ್ಷೇತ್ರದ ಎಲ್ಲರನ್ನೂ ಸೇರಿಸಿಕೊಂಡು ಸಮಿತಿ ರಚಿಸಲಾಗಿದೆ. ಆಮಂತ್ರಣ ಪತ್ರ ಬಿಡುಗಡೆ ಯಶಸ್ವಿಯಾದರೆ ಕಂಬಳ ಯಶಸ್ವಿಯಾಗುತ್ತದೆ ಎನ್ನುವ ವಿಶ್ವಾಸದಿಂದ ಕಾರ್ಯಕ್ರಮ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net