ವಾತ್ಸಲ್ಯ ಕಾರ್ಯಕ್ರಮ ಬಡವರಿಗೆ ವರದಾನ

ಗ್ರಾಮಾಭಿವೃದ್ಧಿ ಯೋಜನೆಯಿಂದ ದರೆಗುಡ್ಡೆಯಲ್ಲಿ ವಾತ್ಸಲ್ಯ ಮನೆ ಹಸ್ತಾಂತರಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಚೌಟರ ಅರಮನೆ ಕುಲದೀಪ್ ಎಂ., ದರೆಗುಡ್ಡೆ ಗ್ರಾಪಂ ಮಾಜಿ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಮಾಜಿ ಸದಸ್ಯ ಪ್ರಸಾದ್ ಮೊದಲಾದವರಿದ್ದರು.

Published on
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಸಮಾಜಮುಖಿ ಚಿಂತನೆಯೊಂದಿಗೆ ಧರ್ಮಸ್ಥಳ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಮುಖೇನ ಅಶಕ್ತರಿಗೆ ಶಕ್ತಿ ನೀಡುವಂತಹ ಕೆಲಸ ಮಾಡುತ್ತಿದೆ. ಕರೊನಾ ಸಂದರ್ಭದಲ್ಲಿ ಅನುಷ್ಠಾನಕ್ಕೆ ಬಂದಿರುವ ವಾತ್ಸಲ್ಯ ಕಾರ್ಯಕ್ರಮ ಬಡವರಿಗೆ ವರದಾನವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಕಾರ್ಯಕ್ರಮದಡಿ ದರೆಗುಡ್ಡೆ ಗ್ರಾಮದ ಗುರುಬೆಟ್ಟು ಚಂದ್ರಾವತಿ ಅವರಿಗೆ ನಿರ್ಮಿಸಿದ ಮನೆಯನ್ನು ಬುಧವಾರ ಹಸ್ತಾಂತರಿಸಿ ಮಾತನಾಡಿದರು.
ಚಂದ್ರಾವತಿ ಕುಟುಂಬಕ್ಕೆ ಆಳ್ವರು 10 ಸಾವಿರ ರೂ. ನೀಡಿದರು. ಚೌಟರ ಅರಮನೆ ಕುಲದೀಪ್ ಎಂ., ದರೆಗುಡ್ಡೆ ಗ್ರಾಪಂ ಮಾಜಿ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಮಾಜಿ ಸದಸ್ಯ ಪ್ರಸಾದ್, ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಸುಭಾಶ್ಚಂದ್ರ ಚೌಟ, ವಲಯ ಸದಸ್ಯ ಜಗತ್ಪಾಲ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಾನಂದ ಕೋಟ್ಯಾನ್, ದಿಲೀಪ್, ಮೇಲ್ವಿಚಾರಕಿ ಯಶೋದಾ, ವಾಲ್ಪಾಡಿ ಒಕ್ಕೂಟ ಅಧ್ಯಕ್ಷೆ ವಿದ್ಯಾ, ಬೆಳುವಾಯಿ ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ವಿದ್ಯಾ ವಂದಿಸಿದರು.

ತಾಲೂಕಿನ 117 ಕುಟುಂಬಗಳಿಗೆ ಮಾಶಾಸನ ನೀಡಲಾಗುತ್ತಿದೆ. 88 ಕುಟುಂಬಗಳಿಗೆ ವಾತ್ಸಲ್ಯ ಕಿಟ್‌ಗಳನ್ನು ನೀಡಲಾಗಿದೆ. 12 ಕುಟುಂಬಗಳಿಗೆ ವಾತ್ಸಲ್ಯ ಮಿಕ್ಸ್, 6 ಮಂದಿಗೆ ವಾತ್ಸಲ್ಯ ವಿದ್ಯಾನಿಧಿ, 3 ವಾತ್ಸಲ್ಯ ಹಳೆಯ ಮನೆ ರಿಪೇರಿ, ಒಂದು ಸೋಲಾರ್, ನಳ್ಳಿ ನೀರಿನ ಅಳವಡಿಕೆ, ಈಗಾಗಲೇ 6 ವಾತ್ಸಲ್ಯ ಮನೆಗಳನ್ನು ರಚಿಸಲಾಗಿದೆ.

---ಫೋಟೋ---
ಎಂಬಿಡಿ-_ಮಾರ್ಚ್-26-_3-ಧರ್ಮಸ್ಥಳ_ ವಾತ್ಸಲ್ಯ
ಗ್ರಾಮಾಭಿವೃದ್ಧಿ ಯೋಜನೆಯಿಂದ ದರೆಗುಡ್ಡೆಯಲ್ಲಿ ವಾತ್ಸಲ್ಯ ಮನೆ ಹಸ್ತಾಂತರಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಚೌಟರ ಅರಮನೆ ಕುಲದೀಪ್ ಎಂ., ದರೆಗುಡ್ಡೆ ಗ್ರಾಪಂ ಮಾಜಿ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಮಾಜಿ ಸದಸ್ಯ ಪ್ರಸಾದ್ ಮೊದಲಾದವರಿದ್ದರು.
************************
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net