ಆಟೋ ಚಾಲಕರಿಂದ ಊರಿಗೆ ಉತ್ತಮ ಹೆಸರು

 ಕುಪ್ಪೆಪದವು ಆಟೋ ರಿಕ್ಷಾ ಚಾಲಕರ ಸಂಘದ ಬೆಳ್ಳಿ ಹಬ್ಬ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯಿಂದ ‘ಯಕ್ಷ ಸಿರಿ’ ಪ್ರಶಸ್ತಿಗೆ ಆಯ್ಕೆಯಾಗಿರುವ ಕುಪ್ಪೆಪದವಿನ ಸುರೇಶ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಶಾಸಕ ಡಾ.ಭರತ್ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಸಂಘ ಅಧ್ಯಕ್ಷ ವಸಂತ ಆಚಾರಿ ಮತ್ತಿತರರಿದ್ದರು.

Published on

ಗುರುಪುರ: ರಿಕ್ಷಾ ಚಾಲಕರು ಊರಿನ ಸ್ವಯಂಸೇವಕರು ಇದ್ದಂತೆ. ಇವರ ಒಳ್ಳೆಯ ಗುಣ ಊರಿಗೆ ಉತ್ತಮ ಹೆಸರು ತಂದು ಕೊಡುತ್ತದೆ. ಕುಪ್ಪೆಪದವು ರಿಕ್ಷಾ ಚಾಲಕರು ಪ್ರತಿ ಬಾರಿಯೂ ಜನೋಪಕಾರಿ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.

ಕುಪ್ಪೆಪದವು ಆಟೋ ರಿಕ್ಷಾ ಚಾಲಕರ ಸಂಘದ ಬೆಳ್ಳಿ ಹಬ್ಬ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಂಘ ಅಧ್ಯಕ್ಷ ವಸಂತ ಆಚಾರಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಭೋಜರಾಜ್ ಜೈನ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಮೂಲ್ಕಿ ಐಎಎಂ ಫೌಂಡೇಶನ್‌ನ ಇನಾಯತ್ ಅಲಿ, ನಟ ಸತೀಶ್ ಬಂದಲೆ, ಕುಪ್ಪೆಪದವು ದುರ್ಗೇಶ್ವರಿ ದೇವಸ್ಥಾನ ಅರ್ಚಕ ಗುರುಪ್ರಸಾದ್ ಕಾರಂತ, ಸೇವ್ ಲೈಫ್ ಚಾರಿಟೆಬಲ್ ಅರ್ಜುನ್ ಭಂಡಾರ‌್ಕರ್, ಕಿಲೆಂಜಾರು ಅರಮನೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಾಬು ಪಿ.ಎಂ., ಮಹಮ್ಮದ್ ಶರೀಫ್, ಪ್ರವೀಣ್ ಆಳ್ವ, ಗಿರೀಶ್ ಆಳ್ವ, ಸುಧೀರ್ ಜೈನ್ ಉಪಸ್ಥಿತರಿದ್ದರು.
ರಿಕ್ಷಾ ಚಾಲಕರಾದ ಪ್ರಶಾಂತ್ ಅಟ್ಟೆಪದವು, ಮೋಹನ್ ಭಂಡಾರಿ, ಮಿಥುನ್ ಸಹಕರಿಸಿದರು. ರವಿ ಅಟ್ಟೆಪದವು ವರದಿ ವಾಚಿಸಿದರು. ಜಗದೀಶ್ ದುರ್ಗಾಕೋಡಿ ಸ್ವಾಗತಿಸಿದರು. ಲಕ್ಷ್ಮ್ಮೀಶ ನಿರೂಪಿಸಿದರು. ಸಂತೋಷ್ ಬೊಳಿಯ ವಂದಿಸಿದರು.

ಸಾಧಕರಿಗೆ ಸನ್ಮಾನ

ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ 2026ನೇ ಸಾಲಿನ ಯಕ್ಷ ಸಿರಿ ಪ್ರಶಸ್ತಿಗೆ ಆಯ್ಕೆಯಾಗಿರುವ ಯಕ್ಷ ಕಲಾವಿದ ಸುರೇಶ್ ಪೂಜಾರಿ ಬಳ್ಳಿ, ರಾಷ್ಟ್ರೀಯ ವಿಶೇಷ ಒಲಿಂಪಿಕ್ಸ್‌ನಲ್ಲಿ 2 ಚಿನ್ನದ ಪದಕ, ರಾಜ್ಯಮಟ್ಟದಲ್ಲಿ ಚಿನ್ನದ ಪದಕ ವಿಜೇತೆ ವಿಶೇಷ ಚೇತನೆ ಸರಳಾ, ಡಾನ್ಸ್ ಕರ್ನಾಟಕ ಸ್ಪರ್ಧೆ ಫೈನಲಿಸ್ಟ್ ಶ್ರಾವ್ಯಾ ಕುಪ್ಪೆಪದವು ಅವರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net