ಚಾತುರ್ಮಾಸ್ಯ ಶಾಸ್ತ್ರದಲ್ಲಿ ಸಂಚಾರ ಮಾಡುವ ಕಾಲ

 ಸಭಾ ಕಾರ್ಯಕ್ರಮದಲ್ಲಿ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರಮುಖರಾದ ಕಿರಣ್ ಕುಮಾರ್ ಕೊಡ್ಗಿ, ರಮಣ ಉಪಾಧ್ಯಾಯ, ರಮೇಶ್ ವೈದ್ಯ ಮೊದಲಾದವರಿದ್ದರು.
ಸಭಾ ಕಾರ್ಯಕ್ರಮದಲ್ಲಿ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರಮುಖರಾದ ಕಿರಣ್ ಕುಮಾರ್ ಕೊಡ್ಗಿ, ರಮಣ ಉಪಾಧ್ಯಾಯ, ರಮೇಶ್ ವೈದ್ಯ ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ
ಪ್ರತಿದಿನ ಸಂಚಾರದಲ್ಲಿರುವ ಯತಿಗಳು ಸಾಧಕರು 4 ತಿಂಗಳು ಸಂಚರಿಸದೆ ಒಂದೇ ಕಡೆಯಲ್ಲಿ ಇದ್ದು ಶಾಸ್ತ್ರದಲ್ಲಿ ಸಂಚಾರ ಮಾಡುವ ಕಾಲ ಚಾತುರ್ಮಾಸ್ಯ ವ್ರತದ ಸಮಯವಾಗಿದೆ ಎಂದು ಬಾರಕೂರು ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.
ಬಾರ್ಕೂರು ಪುರಾತನ ಭಂಡಾರಕೇರಿ ಮಠದ ವಿದ್ಯಾಮಾನ್ಯ ತೀರ್ಥರ ಪೀಠಾರೋಹಣದ ಶತಮಾನೋತ್ಸವ ಆಚರಣೆ ಅಂಗವಾಗಿ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ 47ನೇ ಚಾತುರ್ಮಾಸ್ಯ ವ್ರತ ಭಂಡಾರಕೇರಿ ಮಠದಲ್ಲಿ ಜರುಗಲಿರುವ ಚಾತುರ್ಮಾಸ್ಯದ ಶ್ರೀಗಳ ಪುರಪ್ರವೇಶ ಬಾರಕೂರು ಕೋಟೇಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ರಥಬೀದಿ ಮೂಲಕ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದ ತನಕ ಮೆರವಣಿಗೆಯಲ್ಲಿ ಆಗಮಿಸಿದ ಬಳಿಕ ಜರುಗಿದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀಗಳು ರಚಿಸಿದ ಭಾಗವತ ಸಂಪ್ರದಾಯ ಆಚರಣೆ ಕುರಿತು ರಚಿಸಿದ ಪುಸ್ತಕ ಬಿಡುಗಡೆ ಮಾಡಲಾಯಿತು. ಶಾಸಕ ಕಿರಣ್ ಕುವಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ರಮಣ ಉಪಾಧ್ಯಾಯ, ಕರ್ಣಾಟಕ ಬ್ಯಾಂಕ್ ಜಿಎಂ ರಮೇಶ್ ವೈದ್ಯ, ಬಾರಕೂರು ಕೊಟೇಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜುನಾಥ್ ರಾವ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಪ್ರದೀಪ ಕಲ್ಕೂರ, ಶ್ರೀಪಟ್ಟಾಭಿರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಶ್ ಪೈ ಮೊದಲಾದವರಿದ್ದರು.

ಬಾರಕೂರು ಗ್ರಾಮ ಪಂಚಾಯಿತಿ ವಾಜಿ ಅಧ್ಯಕ್ಷ ಶಾಂತರಾಮ ಶೆಟ್ಟಿ ಸ್ವಾಗತಿಸಿದರು. ವಿಜಯ ಕಡೆಕಾರ್ ಪ್ರಾರ್ಥಿಸಿದರು. ಡಾ.ಶ್ರೀನಿಧಿ ವಶಿಷ್ಠ ಪ್ರಸ್ತಾವಿಸಿದರು. ಜಯರಾಮ ಆಚಾರ್ಯ ನಿರೂಪಿಸಿದರು. ವೆಂಕಟರಮಣ ಭಂಡಾರ್ಕರ್ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net