ಪೀಳಿಗೆಗೆ ಧರ್ಮ, ಸಂಸ್ಕೃತಿ ಉಳಿಸುವ ಕಾರ್ಯ

ಉಪ್ಪಿನಂಗಡಿಯಲ್ಲಿ ನಾಗಮಂಡಲೋತ್ಸವ ಸಮಿತಿಯಿಂದ ನಡೆದ ಸಭೆಯಲ್ಲಿ ಅರುಣ್ ಕುವಾರ್ ಪುತ್ತಿಲ ಮಾತನಾಡಿದರು. ಚಂದಪ್ಪ ಮೂಲ್ಯ ಶ್ರೀರಾಮ ಭಟ್ ಪಾತಾಳ, ಹರಿಪ್ರಸಾದ್ ಶೆಟ್ಟಿ ಇತರರಿದ್ದರು.
ಉಪ್ಪಿನಂಗಡಿಯಲ್ಲಿ ನಾಗಮಂಡಲೋತ್ಸವ ಸಮಿತಿಯಿಂದ ನಡೆದ ಸಭೆಯಲ್ಲಿ ಅರುಣ್ ಕುವಾರ್ ಪುತ್ತಿಲ ಮಾತನಾಡಿದರು. ಚಂದಪ್ಪ ಮೂಲ್ಯ ಶ್ರೀರಾಮ ಭಟ್ ಪಾತಾಳ, ಹರಿಪ್ರಸಾದ್ ಶೆಟ್ಟಿ ಇತರರಿದ್ದರು.
Published on
ಉಪ್ಪಿನಂಗಡಿ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಮತ್ತು ಉಪ್ಪಿನಂಗಡಿ ನಾಗಮಂಡಲೋತ್ಸವ ಸಮಿತಿ ವತಿಯಿಂದ ಉಪ್ಪಿನಂಗಡಿಯಲ್ಲಿ ನಡೆದ ನಾಗಮಂಡಲೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮದ ಖರ್ಚು ವೆಚ್ಚಗಳ ಲೆಕ್ಕಪತ್ರ ಮಂಡನೆ ಮತ್ತು ಕಾರ್ಯಕರ್ತರಿಗೆ ಅಭಿನಂದನೆ ಸಭೆ ಉಪ್ಪಿನಂಗಡಿಯ ಶ್ರೀ ಶಕ್ತಿ ಸಭಾಭವನದಲ್ಲಿ ನಡೆಯಿತು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಚಾಲಕ ಅರುಣ್‌ಕುವಾರ್ ಪುತ್ತಿಲ ಮಾತನಾಡಿ, ನಮ್ಮ ಧರ್ಮ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉಪ್ಪಿನಂಗಡಿ ಭಾಗದ ಹಿಂದೂ ಬಂಧುಗಳ ಸಹಕಾರದಿಂದ ನಾಗಮಂಡಲೋತ್ಸವ ನಡೆಸಲಾಗಿದೆ. ಸಾರ್ವಜನಿಕ ಸೇವೆಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ಗೆ ಉಪ್ಪಿನಂಗಡಿಯ ಉದ್ಯಮಿ ಸುಜೀರ್ ಗಣಪತಿ ನಾಯಕ್ ಹಾಗೂ ಭೀವಾ ಜ್ಯುವೆಲ್ಲರ್ಸ್ ವತಿಯಿಂದ ತಲಾ ಒಂದೊಂದು ಆಂಬುಲೆನ್ಸ್ ನೀಡಲಾಗಿದ್ದು, ಅದನ್ನು ನಾಗಮಂಡಲೋತ್ಸವದಲ್ಲಿ ಲೋಕಾರ್ಪಣೆಗೊಳಿಸಲಾಗಿದೆ ಎಂದರು.
ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷ ಚಂದಪ್ಪ ಮೂಲ್ಯ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿನ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ, ಕಾರ್ಯಾಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಕೋಶಾಧಿಕಾರಿ ಯತೀಶ್ ಶೆಟ್ಟಿ, ಉದ್ಯಮಿ ಸುಜೀರ್ ಗಣಪತಿ ನಾಯಕ್, ಮಹೇಂದ್ರ ವರ್ಮ ಬಜತ್ತೂರು, ಜಯಂತ್ ಪೊರೋಳಿ, ಉಮೇಶ್, ಕೈಲಾರು ರಾಜಗೋಪಾಲ್ ಭಟ್, ಹರಿಕೃಷ್ಣ ಕಾಂಚನ, ನವೀನ್ ಕಲ್ಯಾಟೆ ರಮೇಶ್ ಭಂಡಾರಿ, ಉಮೇಶ್ ಕೊಡಿಬೈಲ್, ಅನಿಲ್ ತೆಂಕಿಲ, ರವಿಕುವಾರ್ ರೈ, ಬಾಲಕೃಷ್ಣ ಶೆಟ್ಟಿ ಬಾರ್ಲ ಉಪಸ್ಥಿತರಿದ್ದರು, ಪ್ರಶಾಂತ್ ನೆಕ್ಕಿಲಾಡಿ ಸ್ವಾಗತಿಸಿದರು. ಧನ್ಯವಾದ ಸಮರ್ಪಿಸಿದರು. ಧರ್ನಪ್ಪ ನಾಯ್ಕ ಬೊಳ್ಳಾವು ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net