ಪೀಳಿಗೆಗೆ ತುಳು ಪರಂಪರೆ ಪರಿಚಯಿಸುವ ಕಾರ್ಯ

ಶಾಂತಿಶ್ರೀ ಜೈನ ಮಹಿಳಾ ಸಮಾಜದ ವತಿಯಿಂದ ಸುಮಂತ್ ಕುಮಾರ್ ಜೈನ್ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಾಂತಿಶ್ರೀ ಜೈನ ಮಹಿಳಾ ಸಮಾಜದ ವತಿಯಿಂದ ಸುಮಂತ್ ಕುಮಾರ್ ಜೈನ್ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Published on
ಬೆಳ್ತಂಗಡಿ: ತುಳು ಭಾಷೆ ಮತ್ತು ಸಂಸ್ಕೃತಿ ಅತ್ಯಂತ ಪ್ರಾಚೀನ ಹಾಗೂ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಆಧುನಿಕ ಯುಗದಲ್ಲಿ ಯುವ ಪೀಳಿಗೆಗೆ ನಮ್ಮ ಮೂಲ ಪರಂಪರೆಯನ್ನು ಪರಿಚಯಿಸುವ ಮತ್ತು ಅದನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ವಿಚಾರ ಸಂಕಿರಣಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಿವೃತ್ತ ಪ್ರಾಧ್ಯಾಪಕಿ ಪ್ರೊ.ತ್ರಿಶಿಲಾ ಜೈನ್ ಕೆ.ಎಸ್. ಅಭಿಪ್ರಾಯಪಟ್ಟರು.
ಮಂಗಳೂರು ವಿವಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ಬೆಳ್ತಂಗಡಿಯ ಶಾಂತಿಶ್ರೀ ಜೈನ ಮಹಿಳಾ ಸಮಾಜ, ಗುರುವಾಯನಕೆರೆಯ ಎಕ್ಸೆಲ್ ಪದವಿಪೂರ್ವ ಕಾಲೇಜುಗಳ ಜಂಟಿ ಆಶ್ರಯದಲ್ಲಿ ‘ತುಳು ಭಾಷೆ, ಸಾಹಿತ್ಯ ಬೊಕ್ಕ ಸಂಸ್ಕೃತಿ’ ಎಂಬ ವಿಷಯದ ವಿಶೇಷ ವಿಚಾರಸಂಕಿರಣವನ್ನು ಗುರುವಾರ ಎಕ್ಸೆಲ್ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಭತ್ತ ತುಂಬಿದ ಕಳಸೆಯಲ್ಲಿ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಎಕ್ಸೆಲ್ ಸಮೂಹ ವಿದ್ಯಾಸಂಸ್ಥೆಗಳ ಮುಖ್ಯಸ್ಥ ಸುಮಂತ್ ಕುಮಾರ್ ಜೈನ್ ಮಾನತಾಡಿ, ಶಿಕ್ಷಣ ಸಂಸ್ಥೆಗಳು ಪಠ್ಯ ಬೋಧನೆಗೆ ಸೀಮಿತವಾಗಬಾರದು. ಪ್ರಾದೇಶಿಕ ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ಬೆಳೆಸುವ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠದ ಸಂಯೋಜಕ ಡಾ.ಧನಂಜಯ ಕುಂಬ್ಳೆ, ಕಾಲೇಜಿನ ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ಉಪಸ್ಥಿತರಿದ್ದರು.
ಶಾಂತಿಶ್ರೀ ಜೈನ ಮಹಿಳಾ ಸಮಾಜದ ವತಿಯಿಂದ ಸುಮಂತ್ ಕುಮಾರ್ ಜೈನ್ ಅವರನ್ನು ಸನ್ಮಾನಿಸಲಾಯಿತು. ವಿಚಾರಗೋಷ್ಠಿಯಲ್ಲಿ ‘ತುಳು ಭಾಷೆ ಮತ್ತು ಸಾಹಿತ್ಯ’ ಕುರಿತು ತುಳು ಸಂಶೋಧಕ ಡಾ.ಯಶುಕುಮಾರ್ ಡಿ. ಹಾಗೂ ‘ತುಳು ಸಂಸ್ಕೃತಿ’ಯ ವಿಶಿಷ್ಟತೆಯ ಕುರಿತು ತುಳು ವಿದ್ವಾಂಸ ದಯಾನಂದ ಜಿ.ಕತ್ತಲ್‌ಸಾರ್‌ವಿಶೇಷ ಉಪನ್ಯಾಸ ನೀಡಿದರು.
ರಾಜಶ್ರೀ ಹೆಗ್ಡೆ ಕಣಿಯೂರು ಗುತ್ತು ಸ್ವಾಗತಿಸಿದರು. ತುಳು ಪೀಠದ ಸಂಯೋಜಕ ಪ್ರಸಾದ್ ಅಂಚನ್ ವಂದಿಸಿದರು. ಉಪನ್ಯಾಸಕರಾದ ವೈಷ್ಣವಿ, ಚಂದ್ರಪ್ಪ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net