ಶಿವಶರಣ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಘಟಕ ಉದ್ಘಾಟನೆ, ಶ್ರೀ ನಿಜ ಸುಖಿ ಶಿವ ಚರಣ ಹಡಪದ ಅಪ್ಪಣ್ಣನವರ 892ನೇ ಜಯಂತ್ಯುತ್ಸವ ನಡೆಯಿತು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನೀಲ್ ಆಳ್ವ, ಸವಿತಾ, ಸಮಾಜದ ಜಿಲ್ಲಾಧ್ಯಕ್ಷ ಆನಂದ ಭಂಡಾರಿ, ಮಂಗಳೂರು ಹಡಪದ ಸಮಾಜ ಅಧ್ಯಕ್ಷ ಮಲೇಶ್ ಬಿ. ಮೊದಲಾದವರಿದ್ದರು.
Published on:
Copied
Follow Us
ಮೂಲ್ಕಿ: ಶ್ರೀ ನಿಜ ಸುಖಿ ಶಿವ ಚರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಆಚರಣೆಗೆ ಮಾತ್ರ ಸೀಮಿತವಾಗದೆ ಅವರ ಬದುಕನ್ನು ಅಧ್ಯಯನ ಮಾಡಿ ಜೀವನದಲ್ಲಿ ಅಳವಡಿಸಿಕೊಂಡು ಸ್ವಾವಲಂಬಿ, ಶ್ರಮಜೀವಿಗಳಾಗಿ ದೇಶ ಕಟ್ಟುವ ಕಾರ್ಯ ನಡೆಸೋಣ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನೀಲ್ ಆಳ್ವ ಹೇಳಿದರು.
ಶಿವಶರಣ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಘಟಕ ಉದ್ಘಾಟನೆ, ಶ್ರೀ ನಿಜ ಸುಖಿ ಶಿವ ಚರಣ ಹಡಪದ ಅಪ್ಪಣ್ಣನವರ 892ನೇ ಜಯಂತ್ಯುತ್ಸವ ಕಾರ್ಯಕ್ರಮ ಮಂಗಳವಾರ ಕೆ.ಎಸ್.ರಾವ್ ನಗರದ ಲಿಂಗಪ್ಪಯ್ಯ ಕಾಡು ಶ್ರೀ ಭಾಗ್ಯವಂತಿ ದೇವಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ರಾಜ್ಯಾಧ್ಯಕ್ಷ ದೇವು ಕೃಷ್ಣಪ್ಪ ಹಡಪದ ಮುಂಡರಗಿ, ಸಂಚಾಲಕ ಮಲ್ಲು ಅಂಬ್ರಪ್ಪ ಹಡಪದ ಕೂಡಲಸಂಗಮ ನೂತನ ಸಂಘ ಉದ್ಘಾಟಿಸಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನೀಲ್ ಆಳ್ವ ಶ್ರೀ ನಿಜ ಸುಖಿ ಶಿವ ಚರಣ ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವಕ್ಕೆ ಚಾಲನೆ ನೀಡಿದರು. ಸಮಾಜದ ಹಿರಿಯ ಸಾಧಕರು, ಎಸ್‌ಎಸ್‌ಎಲ್‌ಸಿ, ಪಿಯುಸಿ ಸಾಧಕರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸವಿತಾ, ಸಮಾಜದ ಜಿಲ್ಲಾಧ್ಯಕ್ಷ ಆನಂದ ಭಂಡಾರಿ, ಮಂಗಳೂರು ಹಡಪದ ಸಮಾಜ ಅಧ್ಯಕ್ಷ ಮಲೇಶ್ ಬಿ., ಮೂಲ್ಕಿ ನಪಂ ಮಾಜಿ ಸದಸ್ಯ ಶೈಲೇಶ್ ಕುಮಾರ್, ಸಂಗಮ ಇಂಡಿಯನ್ ನ್ಯಾವಿಗೇಷನ್ ಆಫೀಸರ್ ವಿಜಯ್ ಮಾಂತೇಶ್, ಬಿಜೆಪಿ ಮುಖಂಡ ವಿಠಲ್ ಎಂ.ಎನ್., ಕಾಂಗ್ರೆಸ್ ಮುಖಂಡ ಭೀಮಶಂಕರ ಆರ್.ಕೆ., ಸಂಘ ಅಧ್ಯಕ್ಷ ಗಿರಿಮಲ್ಲ ಹಡಪದ ಮತ್ತಿತರರಿದ್ದರು. ಶಿವಾನಂದ ಆರ್.ಕೆ. ನಿರೂಪಿಸಿದರು.