ಪರಮಾತ್ಮನಿಗಿದೆ ಶಾಶ್ವತ ಅಸ್ತಿತ್ವ

 ಮರವಂತೆ ಶ್ರೀ ರಾಮ ಮಂದಿರದ ಮೀನುಗಾರರ ಸೇವಾ ಸಮಿತಿಯ ಶ್ರೀ ಲಕ್ಷ್ಮಣ ದೇವರಿಗೆ ಶ್ರೀ ರಾವೇಶ್ವರ ಮಹಾಸ್ವಾಮೀಜಿ ಸುವರ್ಣ ಕಿರೀಟ ಸಮರ್ಪಿಸಿ ಆಶೀರ್ವಚನ ನೀಡಿದರು. ಪ್ರಮುಖರಾದ ಸುರೇಶ ಖಾರ್ವಿ, ವಾಸುದೇವ ಖಾರ್ವಿ, ವೆಂಕಟರಮಣ ಖಾರ್ವಿ, ಚಂದ್ರ ಖಾರ್ವಿ, ಸೋಮಯ್ಯ ಖಾರ್ವಿ ಮತ್ತಿತರರಿದ್ದರು.
ಮರವಂತೆ ಶ್ರೀ ರಾಮ ಮಂದಿರದ ಮೀನುಗಾರರ ಸೇವಾ ಸಮಿತಿಯ ಶ್ರೀ ಲಕ್ಷ್ಮಣ ದೇವರಿಗೆ ಶ್ರೀ ರಾವೇಶ್ವರ ಮಹಾಸ್ವಾಮೀಜಿ ಸುವರ್ಣ ಕಿರೀಟ ಸಮರ್ಪಿಸಿ ಆಶೀರ್ವಚನ ನೀಡಿದರು. ಪ್ರಮುಖರಾದ ಸುರೇಶ ಖಾರ್ವಿ, ವಾಸುದೇವ ಖಾರ್ವಿ, ವೆಂಕಟರಮಣ ಖಾರ್ವಿ, ಚಂದ್ರ ಖಾರ್ವಿ, ಸೋಮಯ್ಯ ಖಾರ್ವಿ ಮತ್ತಿತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಸಮುದ್ರಕ್ಕೂ ಪರಮಾತ್ಮನಿಗೂ ತುಂಬಾ ಹೋಲಿಕೆ ಇದೆ. ಸಮುದ್ರದ ಆಳ ಅಗಲವನ್ನು ಕಂಡವರಿಲ್ಲ. ಅಂತೆಯೇ ಪರಮಾತ್ಮನ ಆಳ ಅಗಲವನ್ನು ಕಂಡವರಿಲ್ಲ. ಸಮುದ್ರ ಹೇಗೆ ಅನಂತವೋ ಹಾಗೆಯೇ ಪರವಾತ್ಮನೂ ಅನಂತ. ಸಮುದ್ರಕ್ಕೆ ಹೇಗೆ ದೀರ್ಫವಾದ ಅಸ್ತಿತ್ವ ಇದೆಯೋ, ಪರವಾತ್ಮನಿಗೂ ಇದೆ ಶಾಶ್ವತವಾದ ಅಸ್ತಿತ್ವ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯಶ್ರೀ ರಾಮೇಶ್ವರ ಮಹಾಸ್ವಾಮೀಜಿ ಹೇಳಿದರು.
ಮರವಂತೆ ಶ್ರೀರಾಮ ಮಂದಿರದ ಮೀನುಗಾರರ ಸೇವಾ ಸಮಿತಿಯ ದೇವರ ವರ್ಧಂತ್ಯುತ್ಸವ, 93ನೇ ವರ್ಷದ ಶ್ರೀರಾಮ ಭಜನೆ, ಅಖಂಡ ಏಕಾಹ ಭಜನೆ ಪ್ರಯುಕ್ತ ಶುಕ್ರವಾರ ಶ್ರೀ ಲಕ್ಷ್ಮಣ ದೇವರಿಗೆ ಸುವರ್ಣ ಕಿರೀಟ ಸಮರ್ಪಿಸಿ, ವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಪರಮಾತ್ಮ ಎಂಬುದು ಕರುಣೆಯ ಸಮುದ್ರ. ಸಮುದ್ರ ತೀರದಲ್ಲಿ ವಿಷ್ಣು ಸಹಸ್ರ ನಾಮ ಪಠಣ ಬಹಳ ಪ್ರಸ್ತುತ. ಮೀನುಗಾರ ಸಮುದಾಯಕ್ಕೆ ಮರವಂತೆ ಹೆಬ್ಬಾಗಿಲು ಎಂದರು.

ಶ್ರೀ ರಾಮ ಮಂದಿರ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಸುರೇಶ ಖಾರ್ವಿ ದಂಪತಿ ಶ್ರೀಗಳಿಗೆ ಫಲಪುಷ್ಪ ಸಮರ್ಪಿಸಿದರು. ಮಂಗಳೂರಿನ ಸ್ವರ್ಣಗೌರಿ ತಂಡದ ಸದಸ್ಯರು ವಿಷ್ಣು ಸಹಸ್ರನಾಮ ಪಠಿಸಿದರು. ಮೀನುಗಾರ ಮುಖಂಡರಾದ ವಾಸುದೇವ ಖಾರ್ವಿ, ವೆಂಕಟರಮಣ ಖಾರ್ವಿ, ಚಂದ್ರ ಖಾರ್ವಿ, ಸೋಮಯ್ಯ ಖಾರ್ವಿ, ಕಾರ್ಯದರ್ಶಿ ಶೇಖರ ಖಾರ್ವಿ, ಜಿ.ಹೊನ್ನ ಖಾರ್ವಿ, ಮೊದಲಾದವರು ಉಪಸ್ಥಿತರಿದ್ದರು. ಶ್ರೀಧರ ಖಾರ್ವಿ ಮರವಂತೆ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net