ಬೇಸಿಗೆ ಆರಂಭದಲ್ಲೇ ಸುಡಲಾರಂಭಿಸಿದ ಬಿಸಿಲು

 ಕಾಸರಗೋಡು ನೆಲ್ಲಿಕುಂಜೆ ಮುಹಿಯುದ್ದೀನ್ ಮಸೀದಿ ವಠಾರದಲ್ಲಿ ಪಕ್ಷಿಗಳಿಗೆ ನೀರುಣಿಸಲು ಅಳವಡಿಸಿರುವ ಮಣ್ಣಿನ ಮಡಕೆಯಲ್ಲಿ ಕಾಗೆಗಳು ಬಿಸಿಲಿನ ಬೇಗೆಯಿಂದ ಪಾರಾಗಲು ಜಳಕದಲ್ಲಿ ನಿರತವಾಗಿರುವುದು.
ಕಾಸರಗೋಡು ನೆಲ್ಲಿಕುಂಜೆ ಮುಹಿಯುದ್ದೀನ್ ಮಸೀದಿ ವಠಾರದಲ್ಲಿ ಪಕ್ಷಿಗಳಿಗೆ ನೀರುಣಿಸಲು ಅಳವಡಿಸಿರುವ ಮಣ್ಣಿನ ಮಡಕೆಯಲ್ಲಿ ಕಾಗೆಗಳು ಬಿಸಿಲಿನ ಬೇಗೆಯಿಂದ ಪಾರಾಗಲು ಜಳಕದಲ್ಲಿ ನಿರತವಾಗಿರುವುದು.
Published on
ಕಾಸರಗೋಡು: ಜಿಲ್ಲೆಯಲ್ಲಿ ಬಿಸಿಲಿನ ಬೇಗೆ ಹೆಚ್ಚುತ್ತಿದ್ದು, ಹೊಳೆ, ತೋಡುಗಳು ನೀರಿಲ್ಲದೆ ಬರಿದಾಗತೊಡಗಿವೆ. ಕಟ್ಟ ಕಟ್ಟಿ ನೀರು ಸಂಗ್ರಹಿಸುತ್ತಿರುವ ಪ್ರದೇಶದಲ್ಲಿ ಮಾತ್ರ ಹೊಳೆ, ತೋಡುಗಳಲ್ಲಿ ಒಂದಷ್ಟು ನೀರಿನ ಹರಿವು ಕಂಡುಬರುತ್ತಿದ್ದು, ಉಳಿದೆಡೆ ಹೊಳೆ, ತೋಡುಗಳು ನೀರಿಲ್ಲದೆ ಒಣಗುತ್ತಿವೆ. ಬೇಸಿಗೆ ಮಳೆ ಸುರಿಯದಿದ್ದಲ್ಲಿ ಕುಡಿಯುವ ನೀರಿನ ಕ್ಷಾಮ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಎಣ್ಮಕಜೆ ಪಂಚಾಯಿತಿಯ ನಡುಬೈಲು, ಬಣ್ಪುತ್ತಡ್ಕ ಸೇರಿದಂತೆ ಕೆಲವೊಂದು ಉನ್ನತಿ ಕಾಲನಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ಕಾರ್ಮಿಕರಿಗೆ ಸಮಯ ನಿಗದಿ

ಬಿಸಿಲಿನ ಬೇಗೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳಾದ್ಯಂತ ಬಿಸಿಲಿಗೆ ಮೈಯೊಡ್ಡಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಪ್ರತ್ಯೇಕ ಕೆಲಸದ ಸಮಯ ನಿಗದಿಪಡಿಸಲಾಗಿದೆ. ಬಿಸಿಲಿನಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಮಧ್ಯಾಹ್ನ 12ರಿಂದ 3ರವರೆಗೆ ಕಡ್ಡಾಯವಾಗಿ ವಿಶ್ರಾಂತಿ ಕಲ್ಪಿಸುವಂತೆ ಸೂಚಿಸಲಾಗಿದೆ. ಬಿಸಿಲಿನಲ್ಲಿ ಕೆಲಸ ನಿರ್ವಹಿಸುವವರಿಗೆ ಸೂರ್ಯಾಘಾತವುಂಟಾಗುವ ಸಾಧ್ಯತೆ ಮನಗಂಡು ಈ ಕ್ರಮ ಕೈಗೊಳ್ಳಲಾಗಿದ್ದು, ಮೇ 20ರವರೆಗೂ ಆದೇಶ ಜಾರಿಯಲ್ಲಿರಲಿದೆ. ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ವಿವಿಧ ಕಾಲಾವಧಿಯಲ್ಲಿ ಕೆಲಸ ನಿರ್ವಹಿಸಬಹುದಾಗಿದ್ದು, ವಿಶ್ರಾಂತಿ ಸಮಯ ಕಳೆದು ಒಟ್ಟು ಎಂಟು ಗಂಟೆಗಳ ಕಾಲ ಕೆಲಸ ಮಾಡಬಹುದು ಎಂದು ಕಾರ್ಮಿಕ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net