ಶೌರ್ಯ ತಂಡದ ಸೇವಾ ಮನೋಭಾವ ಶ್ಲಾಘನೀಯ

 ಸ್ವಯಂಸೇವಕರ ತರಬೇತಿ ಕಾರ್ಯಾಗಾರವನ್ನು ಹೆಬ್ರಿ ಪಿ.ಎಸ್.ಐ. ಚಂದ್ರ ಎ.ಕೆ. ಉದ್ಘಾಟಿಸಿದರು. ಪ್ರಮುಖರಾದ ಶಾಂತಿಲಾಲ್ ಜಟಿಯ, ಸುಭಾಷ್ ಶಿಂಧೆ, ನೀರೆ ಕೃಷ್ಣ ಶೆಟ್ಟಿ, ನಾಗರಾಜ್ ಶೆಟ್ಟಿ, ಜೈವಂತ್ ಪಟಗಾರ, ರೇಷ್ಮಾ, ಸುರೇಶ್ ಭಂಡಾರಿ, ನಿತೇಶ್ ಕೆ. ಇದ್ದರು.
ಸ್ವಯಂಸೇವಕರ ತರಬೇತಿ ಕಾರ್ಯಾಗಾರವನ್ನು ಹೆಬ್ರಿ ಪಿ.ಎಸ್.ಐ. ಚಂದ್ರ ಎ.ಕೆ. ಉದ್ಘಾಟಿಸಿದರು. ಪ್ರಮುಖರಾದ ಶಾಂತಿಲಾಲ್ ಜಟಿಯ, ಸುಭಾಷ್ ಶಿಂಧೆ, ನೀರೆ ಕೃಷ್ಣ ಶೆಟ್ಟಿ, ನಾಗರಾಜ್ ಶೆಟ್ಟಿ, ಜೈವಂತ್ ಪಟಗಾರ, ರೇಷ್ಮಾ, ಸುರೇಶ್ ಭಂಡಾರಿ, ನಿತೇಶ್ ಕೆ. ಇದ್ದರು.
Published on
ಹೆಬ್ರಿ: ಶೌರ್ಯ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿ ತಂಡದ ಕೆಲಸಗಳು ಸೇವಾ ಮನೋಭಾವದಿಂದ ಕೂಡಿವೆ. ಎಲ್ಲ ಕೆಲಸಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡು ಸದಾ ಸೇವೆಗೆ ಸಿದ್ಧ ಎನ್ನುವ ಭಾವನೆಯಿಂದ ದುಡಿಯುತ್ತಿರುವುದು ಶ್ಲಾಘನಾರ್ಹ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಕಮಾಂಡರ್ ಶಾಂತಿಲಾಲ್ ಜಟಿಯ ಹೇಳಿದರು.
ಹೆಬ್ರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಹೆಬ್ರಿ ತಾಲೂಕು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿ ಸ್ವಯಂಸೇವಕರ ತರಬೇತಿ ಕಾರ್ಯಾಗಾರದಲ್ಲಿ ಮಂಗಳವಾರ ಮಾತನಾಡಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಎಎಸ್‌ಐ ಸುಭಾಷ್ ಶಿಂಧೆ ನೇತೃತ್ವದಲ್ಲಿ ತುರ್ತು ಸಂದರ್ಭಗಳಲ್ಲಿ ನಿರ್ವಹಿಸಬೇಕಾದ ಕಾರ್ಯಗಳ ತರಬೇತಿ ನೀಡಲಾಯಿತು. ಹೆಬ್ರಿ ಪಿಎಸ್‌ಐ ಚಂದ್ರ ಎ.ಕೆ. ಕಾರ್ಯಕ್ರಮ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ, ಕೇಂದ್ರ ಕಚೇರಿಯ ಶೌರ್ಯ ಕಾರ್ಯಕ್ರಮ ಯೋಜನಾಧಿಕಾರಿ ಜೈವಂತ್ ಪಟಗಾರ, ಹೆಬ್ರಿ ತಾಲೂಕು ಯೋಜನಾಧಿಕಾರಿ ರೇಷ್ಮಾ, ಹೆಬ್ರಿ ಶೌರ್ಯ ಸಮಿತಿ ಮಾಸ್ಟರ್ ಸುರೇಶ್ ಭಂಡಾರಿ, ಮೇಲ್ವಿಚಾರಕ ನಿತೇಶ್ ಕೆ., ಉದಯ್, ಹಣಕಾಸು ಪ್ರಬಂಧಕ ಗುರುಪ್ರಸಾದ್ ಉಪಸ್ಥಿತರಿದ್ದರು.
ಯೋಜನಾಧಿಕಾರಿ ರೇಷ್ಮಾ ಸ್ವಾಗತಿಸಿದರು. ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ವಂದಿಸಿದರು. ವಲಯ ಮೇಲ್ವಿಚಾರಕಿ ರೇವತಿ ಕಾರ್ಯಕ್ರಮ ನಿರೂಪಿಸಿದರು.

ಶೌರ್ಯ ತಂಡದ ಸದಸ್ಯರು ವಿಪತ್ತು ನಿರ್ವಹಣಾ ಸಂದರ್ಭಗಳಲ್ಲಿ ತಮ್ಮ ಜೀವದ ಸುರಕ್ಷೆ ಬಗ್ಗೆ ವಿಶೇಷ ಗಮನ ವಹಿಸಬೇಕು.. ಗ್ರಾಮದಲ್ಲಿ ನಡೆಯುವ ಸಂಭವನೀಯ ಆಪತ್ತಿನ ಸಂದರ್ಭಗಳಲ್ಲಿ ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಬೇಕು.

— ಚಂದ್ರ ಎ.ಕೆ. ಹೆಬ್ರಿ ಪಿ.ಎಸ್.ಐ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net