ಭಾಷೆ, ವಸ್ತ್ರಸಂಹಿತೆ ಮೇಲೆ ಬ್ರಿಟಿಷರ ನೆರಳು

 ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಚಾರಸಂಕಿರಣವನ್ನು ಪತ್ರಕರ್ತ ರಂಗನಾಥ ಭಾರದ್ವಾಜ್ ಉದ್ಘಾಟಿಸಿದರು. ಡಾ.ಆರತಿ ವಿ.ಬಿ., ಡಾ.ಪ್ರಭಾಕರ ಭಟ್ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.
ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಚಾರಸಂಕಿರಣವನ್ನು ಪತ್ರಕರ್ತ ರಂಗನಾಥ ಭಾರದ್ವಾಜ್ ಉದ್ಘಾಟಿಸಿದರು. ಡಾ.ಆರತಿ ವಿ.ಬಿ., ಡಾ.ಪ್ರಭಾಕರ ಭಟ್ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.
Published on
ಬಂಟ್ವಾಳ: ಬ್ರಿಟಿಷರು ಭಾರತ ಬಿಟ್ಟು ಹೋದರೂ ಇಲ್ಲಿನ ಭಾಷೆ, ವಸ್ತ್ರ ಸಂಹಿತೆ, ಆಚಾರ-ವಿಚಾರಗಳಲ್ಲಿ ಇಂದಿಗೂ ಅವರ ಪ್ರಭಾವ ಕಾಣುತ್ತಿದ್ದೇವೆ. ಅದಕ್ಕೆ ಇಲ್ಲಿನ ಶಿಕ್ಷಣ ಸಂಸ್ಥೆಗಳೇ ಕಾರಣ ಎಂದು ಪತ್ರಕರ್ತ ರಂಗನಾಥ ಭಾರದ್ವಾಜ್ ಹೇಳಿದರು.
ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ‘ವಸಾಹತು ಮನೋಭಾವದಿಂದ ಭಾರತೀಯತೆಯೆಡೆಗೆ ಒಂದು ಚಿಂತನೆ’ ಎಂಬ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರಿನ ವಿಭು ಅಕಾಡೆಮಿಯ ಸ್ಥಾಪಕಿ, ಪ್ರಾಧ್ಯಾಪಕಿ ಡಾ.ಆರತಿ ವಿ.ಬಿ., ಭಾಷೆ, ಧರ್ಮ, ಸಂಸ್ಕೃತಿ ಮತ್ತು ಆಚರಣೆಗಳ ಮೇಲೊಂದು ಇಣುಕು ನೋಟ ಕುರಿತು ವಿಷಯ ಮಂಡಿಸಿ, ಯಾವ ವಿದೇಶಿ ಶಕ್ತಿಗೂ ಸಮಗ್ರ ಭಾರತ ದೇಶವನ್ನು ಆಡಳಿತ ಮಾಡಲು ಸಾಧ್ಯವಾಗಿಲ್ಲ ಎಂದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಇಂಗ್ಲಿಷ್ ಪ್ರಭಾವ ಜಾಸ್ತಿಯಾಗಿ ನಮ್ಮತನ ಕಳೆದುಕೊಳ್ಳುತ್ತಿದೆ ಎಂದರು.
ಕುಡಚಿ ಮಾಜಿ ಶಾಸಕ ಪಿ.ರಾಜೀವ ಕುಡಚಿ ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆ ವಸಾಹತುಭಾವದಿಂದ ಮುಕ್ತವಾಗುವತ್ತ, ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಶಿಕ್ಷಣ-ಇತಿಹಾಸದ ಮೇಲೊಂದು ಚರ್ಚೆ ವಿಷಯವಾಗಿ ವಿಚಾರ ಮಂಡಿಸಿದರು.
ಅಖಿಲ ಭಾರತೀಯ ಟೋಳಿ ಸದಸ್ಯ ರಘುನಂದನ್, ವಿದ್ಯಾಸಂಸ್ಥೆಯ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ ಉಪಸ್ಥಿತರಿದ್ದರು. ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಸ್ವಾಗತಿಸಿದರು. ವಿದ್ಯಾರ್ಥಿನಿ ಧನುಶ್ರೀ ಕಾರ್ಯಕ್ರಮ ನಿರೂಪಿಸಿದರು.

ಮೆಕಾಲೆ ಭಾರತಕ್ಕೆ ಬಂದ ಬಳಿಕ ಸಂಸ್ಕೃತ ಮೂಲೆಗುಂಪಾಯಿತು. ಈಗ ಕನ್ನಡಕ್ಕೆ ಅದೇ ಪರಿಸ್ಥಿತಿ ಬರುತ್ತಿದೆ. ಸಾಂಸ್ಕೃತಿಕ ಸ್ಮರಣೆಯನ್ಮು ಉಳಿಸುವುದು ಭಾಷೆ. ಅದನ್ನು ಕಿತ್ತು ಹಾಕಿದ್ದು ಮೆಕಾಲೆಯ ಶಿಕ್ಷಣ ಪದ್ಧತಿ. ಕೊನೋಕಾರ್ಪಸ್ ತರ ಮೆಕಾಲೆ ಶಿಕ್ಷಣ ಪದ್ಧತಿ ನಮ್ಮನ್ನು ಮೇಲಿಂದ ಮೇಲೆ ನಾಶ ಮಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net