ಇಕ್ಕಟ್ಟಾದ ಸರ್ವೀಸ್ ರಸ್ತೆ: ಸರ್ವೀಸ್ ರಸ್ತೆಯಲ್ಲಿ ಬಸ್ ಬೇ ಇಲ್ಲದ ಕಾರಣ, ಬಸ್‌ಗಳು ಪ್ರಯಾಣಿಕರನ್ನು ಇಳಿಸಲು ಮತ್ತು ಹತ್ತಿಸಲು ಸರ್ವೀಸ್ ರಸ್ತೆಯಲ್ಲೇ ನಿಲ್ಲಿಸಬೇಕಾಗುತ್ತದೆ. ಎರಡು ಭಾರಿ ವಾಹನಗಳು ಸಲೀಸಾಗಿ ಸಂಚರಿಸಲೂ ಸಾಧ್ಯವಾಗದಷ್ಟು ಸರ್ವೀಸ್ ರಸ್ತೆ ಇಕ್ಕಟ್ಟಾಗಿವೆ. ಈ ವೇಳೆ ರಸ್ತೆ ಅಂಚಿಗೆ ಬಸ್‌ಗಳು ಬಂದರೆ ತಂಗುದಾಗಣಗಳ ಮೇಲ್ಛಾವಣಿಗೆ ಡಿಕ್ಕಿಯಾಗುತ್ತವೆ. ಇದರಿಂದ ಬಸ್‌ಗಳಿಗೂ, ತಂಗುದಾಣಕ್ಕೂ ಹಾನಿಯುಂಟಾಗುವ ಭೀತಿ ಇದೆ. ಇದನ್ನು ತಪ್ಪಿಸುವುದಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಊರೂಲುಂಗಾಲ್ ಸೊಸೈಟಿ ರಸ್ತೆ ಬದಿಯಲ್ಲಿ ಬ್ಯಾರೆಲ್ ಅಡ್ಡ ಇರಿಸಿ ಬಸ್‌ಗಳು ತಂಗುದಾಣದ ಸಮೀಪಕ್ಕೆ ಬಾರದಂತೆ ಕ್ರಮ ಕೈಗೊಂಡಿದೆ. ಆದರೆ ರಸ್ತೆ ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.