ಸಮಾಜದಲ್ಲಿ ಹೆಣ್ಣಿನ ಪಾತ್ರ ಮಹತ್ತರ

 ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯ ಮಾಹಿತಿ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಮೇರಿ ಸ್ಮಿತಾ, ರಾಜಶ್ರೀ ರಾವ್, ಅಪರ್ಣಾ, ರೆನಿಟಾ, ಶಶಿಕಲಾ ಮೊದಲಾದವರು ಉಪಸ್ಥಿತರಿದ್ದರು
ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯ ಮಾಹಿತಿ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಮೇರಿ ಸ್ಮಿತಾ, ರಾಜಶ್ರೀ ರಾವ್, ಅಪರ್ಣಾ, ರೆನಿಟಾ, ಶಶಿಕಲಾ ಮೊದಲಾದವರು ಉಪಸ್ಥಿತರಿದ್ದರು
Published on

ಬೆಳ್ತಂಗಡಿ: ಸಮಾಜದಲ್ಲಿ ಹೆಣ್ಣಿನ ಪಾತ್ರ ಮಹತ್ತರವಾದದ್ದು, ತನ್ನ ಬದುಕಿನುದ್ದಕ್ಕೂ ಹಲವು ಆಯಾಮಗಳಲ್ಲಿ ಪಾತ್ರ ನಿರ್ವಹಿಸುತ್ತಾಳೆ. ಹಾಗಾಗಿ ವಿದ್ಯಾರ್ಥಿನಿಯರು ಪ್ರೌಢಾವಸ್ಥೆಯಿಂದಲೇ ತಮ್ಮ ದೇಹದ ವಾಸ್ತವಿಕ ಸಂಗತಿಗಳನ್ನು ಅರಿತುಕೊಳ್ಳಬೇಕು. ಪಕೃತಿಯ ನಿಯಮದಂತೆ ನಾವು ಮುಂದೆ ಸಾಗಬೇಕು ಎಂದು ಬೆಳ್ತಂಗಡಿಯ ಸ್ತ್ರೀ ರೋಗ ತಜ್ಞೆ ಡಾ.ವಿನಯ ಕಿಶೋರ್ ಹೇಳಿದರು.

ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ಎನ್ನೆಸ್ಸೆಸ್ ಘಟಕ, ಯುವ ರೆಡ್‌ಕ್ರಾಸ್ ಘಟಕ, ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಸಮಿತಿ, ಬೆಳ್ತಂಗಡಿ ರೋಟರಿ ಕ್ಲಬ್ ಹಾಗೂ ಆನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಸಮಿತಿ ಅಧ್ಯಕ್ಷೆ ಮೇರಿ ಸ್ಮಿತಾ ಅಧ್ಯಕ್ಷತೆ ವಹಿಸಿದ್ದರು. ಆನ್ಸ್ ಕ್ಲಬ್‌ನ ಅಧ್ಯಕ್ಷೆ ರಾಜಶ್ರೀ ರಾವ್, ಕಾರ್ಯದರ್ಶಿ ಅಪರ್ಣಾ, ಎನ್ನೆಸ್ಸೆಸ್ ಉಪ ಯೋಜನಾಧಿಕಾರಿ ರೆನಿಟಾ, ಯುವ ರೆಡ್‌ಕ್ರಾಸ್ ಘಟಕದ ಸದಸ್ಯೆ ಶಶಿಕಲಾ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಿಂಚನಾ ಸ್ವಾಗತಿಸಿದರು. ವರ್ಷಾ ಕೆ.ಪಿ. ನಿರೂಪಿಸಿದರು. ಅಮೂಲ್ಯಾ ಶೆಟ್ಟಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net