ಮೂಡುಪೆರಾರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಪ್ರಥಮ ಶಾಖೆಯನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಉದ್ಘಾಟಿಸಿದರು. ಶಾಸಕ ಡಾ.ಭರತ್ ಶೆಟ್ಟಿ, ಸಂಘ ಅಧ್ಯಕ್ಷ ಗಣೇಶ್ ಪೂಜಾರಿ, ಸಂಜೀವ ಪೂಜಾರಿ, ಜಯಂತಿ ಡಿ.ಮಾಮಂಜೂರು, ಜಯಲಕ್ಷ್ಮೀ, ಮೀನಾಕ್ಷಿ ಗೌಡ, ಸೂರ್ಯಕಾಂತ ಜೆ.ಸುವರ್ಣ ಮೊದಲಾದವರಿದ್ದರು.
Published on:
Copied
Follow Us
ವಿಜಯವಾಣಿ ಸುದ್ದಿಜಾಲ ಗುರುಪುರ
ಗ್ರಾಮೀಣ ಅಭಿವೃದ್ಧಿಯಲ್ಲಿ ಹಣಕಾಸು ಸೊಸೈಟಿಗಳ ಪಾತ್ರ ದೊಡ್ಡದಿದೆ. ಮೂಡುಪೆರಾರ ವಿವಿದ್ಧೋದ್ದೇಶ ಸಹಕಾರಿ ಸಂಘ 50 ವರ್ಷಗಳಿಂದ ಅಂತಹ ಕೆಲಸ ಮಾಡುತ್ತಾ ಬಂದಿದೆ ಎಂಬುದು ಹೆಮ್ಮೆಯ ವಿಷಯ ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಕಿನ್ನಿಕಂಬಳದಲ್ಲಿ ಭಾನುವಾರ ಮೂಡುಪೆರಾರ ವಿವಿದ್ಧೋದ್ದೇಶ ಸಹಕಾರಿ ಸಂಘದ ನವೀಕೃತ ಕಟ್ಟಡ, ಕಟ್ಟಡದಲ್ಲಿ ಪ್ರಥಮ ಅಂತಸ್ತಿನಲ್ಲಿ ಸ್ಥಾಪಿಸಲಾದ ಮೂಡುಪೆರಾರ ಮೂರ್ತೆದಾರರ ಸೇವಾ ಸಹಕಾರಿ ಸಂಘ ಪ್ರಥಮ ಶಾಖೆ ಉದ್ಘಾಟಿಸಿ ಮಾತನಾಡಿದರು.
ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ.ಭರತ್ ಶೆಟ್ಟಿ, ಮಾಜಿ ಜಿಪಂ ಸದಸ್ಯರಾದ ಕೃಷ್ಣ ಅಮೀನ್, ಜನಾರ್ದನ ಗೌಡ, ಮೂಡುಪೆರಾರ ಗ್ರಾಪಂ ನಿಕಟಪೂರ್ವ ಅಧ್ಯಕ್ಷೆ ಮೀನಾಕ್ಷಿ ಗೌಡ, ದ.ಕ. ಜಿಲ್ಲಾ ಮೂರ್ತೆದಾರರ ಸಂಘ ಅಧ್ಯಕ್ಷ ಸಂಜೀವ ಪೂಜಾರಿ, ಗ್ರಾಪಂ ಸದಸ್ಯ ಫಾಸ್ಕಲ್ ಫರ್ನಾಂಡಿಸ್, ಉದಯ ಭಟ್ ಕಿನ್ನಿಕಂಬಳ, ಬಿಲ್ಲವರ ಮಹಾಮಂಡಲ ಅಧ್ಯಕ್ಷ ಸೂರ್ಯಕಾಂತ ಜೆ.ಸುವರ್ಣ, ಗುರುಕಂಬಳ ಜಾಮಿಯಾ ಮಸೀದಿ ಫಯಾಜ್ ಅಹ್ಮದ್ ಪಟೇಲ್ ಶುಭಹಾರೈಸಿದರು. ಸಂಘದ ಸದಸ್ಯರು, ಸಿಬ್ಬಂದಿ, ನಿರ್ದೇಶಕರ ಸಹಿತ ಸಹಕರಿಸಿದ ಹಲವರನ್ನು ಗೌರವಿಸಲಾಯಿತು.
ಸುಚಿತಾ ಡಿ. ಸ್ವಾಗತಿಸಿದರು. ಜಿಲ್ಲಾ ಮೂರ್ತೆದಾರರ ಸಂಘ ಕಿಶೋರ್ ಕುಮಾರ್, ವನಿತಾ, ರೆಜಿನಾ ಮೇರಿ, ಮೋನಪ್ಪ ಪೂಜಾರಿ, ರತ್ನಾಕರ ಶೆಟ್ಟಿ, ರಿಕ್ಷಾ ಚಾಲಕರ ಸಂಘ ಅಧ್ಯಕ್ಷ ನಾಸಿರ್ ಹುಸೇನ್ ಮತ್ತಿತರರು ಉಪಸ್ಥಿತರಿದ್ದರು. ವಿವಿದ್ಧೋದ್ದೇಶ ಸಂಘ ಕಾರ್ಯದರ್ಶಿ ಹರೀಶ್ ವರದಿ ಮಂಡಿಸಿದರು. ನವೀನ್ ಕುಮಾರ್ ಪೆರಾರ ನಿರೂಪಿಸಿದರು. ಮೂಡುಪೆರಾರ ಮೂರ್ತೆದಾರರ ಸಂಘ ಉಪಾಧ್ಯಕ್ಷ ವಿನೋಧರ ಪೂಜಾರಿ ವಂದಿಸಿದರು.
ಇಂತಹ ಹಣಕಾಸು ಸಂಸ್ಥೆ ದ.ಕ. ಜಿಲ್ಲೆಯಲ್ಲಿ ಉತ್ತಮ ವ್ಯವಹಾರ ನಡೆಸುತ್ತಿವೆ. ವ್ಯವಹಾರದಲ್ಲಿ ‘ಹಣಕಾಸಿನ ಶಿಸ್ತು’ ಅತ್ಯಗತ್ಯ. ಸಂಘಗಳಲ್ಲಿ ಮಹಿಳಾ ಉದ್ಯೋಗಿಗಳು ಹೆಚ್ಚಿರುವುದರಿಂದ ಸಾಲ ಮರುಪಾವತಿ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಗ್ರಾಮಗಳಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಅವಕಾಶವಿರುತ್ತದೆ.