ಭಾಷೆ ಪೀಳಿಗೆಗೆ ದಾಟಿಸುವ ಜವಾಬ್ದಾರಿ

 ಕಾರ್ಕಳದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನ ಆಚರಿಸಲಾಯಿತು. ಪ್ರಮುಖರಾದ ಬಜಗೋಳಿ ರವೀಂದ್ರ ಶೆಟ್ಟಿ, ನೀಲಾವರ ಸುರೇಂದ್ರ ಅಡಿಗ, ಅಶ್ವತ್ಥ್ ಎಸ್.ಎಲ್., ರಾಮಚಂದ್ರ ಐತಾಳ, ಎಸ್.ನಿತ್ಯಾನಂದ ಪೈ ಮತ್ತಿತರರು ಇದ್ದರು.
ಕಾರ್ಕಳದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನ ಆಚರಿಸಲಾಯಿತು. ಪ್ರಮುಖರಾದ ಬಜಗೋಳಿ ರವೀಂದ್ರ ಶೆಟ್ಟಿ, ನೀಲಾವರ ಸುರೇಂದ್ರ ಅಡಿಗ, ಅಶ್ವತ್ಥ್ ಎಸ್.ಎಲ್., ರಾಮಚಂದ್ರ ಐತಾಳ, ಎಸ್.ನಿತ್ಯಾನಂದ ಪೈ ಮತ್ತಿತರರು ಇದ್ದರು.
Published on

ಕಾರ್ಕಳ: ಉತ್ತಮ ಸೊಗಡುಳ್ಳ ಕುಂದಾಪುರ ಭಾಷೆ ನಶಿಸಿ ಹೋಗದಂತೆ ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ಮಹತ್ವದಾಗಿದೆ. ಸ್ವಾರ್ಥ ರಹಿತವಾಗಿ ಸಮಾಜಮುಖಿಯಾಗಿ ಕೆಲಸ ಮಾಡುವವರು ಅಗತ್ಯವಾಗಿದ್ದಾರೆ ಎಂದು ರಾಜ್ಯ ಕ್ವಾರಿ ಮತ್ತು ಕ್ರಶರ್ ಅಸೋಸಿಯೇಷನ್ ಅಧ್ಯಕ್ಷ ಬಜಗೋಳಿ ರವೀಂದ್ರ ಶೆಟ್ಟಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಘಟಕ ಹಾಗೂ ಕಾರ್ಲದ ಕುಂದಾಪ್ರದರ್ ಸಹಯೋಗದಲ್ಲಿ ಕಾರ್ಕಳದಲ್ಲಿ ಬುಧವಾರ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಶ್ವತ್ಥ್ ಎಸ್.ಎಲ್. ಮಾತನಾಡಿದರು. ಬ್ರಹ್ಮಾವರ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ ವಿಶೇಷ ಉಪನ್ಯಾಸ ನೀಡಿದರು.
ಕಾರ್ಕಳ ರಂಗ ಸಂಸ್ಕೃತಿಯ ಅಧ್ಯಕ್ಷ ಎಸ್.ನಿತ್ಯಾನಂದ ಪೈ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಿದ್ಧಾಪುರ ವಾಸುದೇವ ಭಟ್ ಉಪಸ್ಥಿತರಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಗಣೇಶ್ ಜಾಲ್ಸೂರು ಮತ್ತು ಅವನಿ ಉಪಾಧ್ಯ ನಿರೂಪಿಸಿದರು. ಕುಂದಾಪ್ರ ಕನ್ನಡದ ಭಾಷಾ ಚೆಲುವನ್ನು ಧಾರಿಣಿ ಉಪಾಧ್ಯ ಹಾಡಿದರು. ಮಾಲತಿ ಪ್ರಭು ವಂದಿಸಿದರು.

ಗ್ರಂಥಸ್ಥ ಕನ್ನಡಕ್ಕಿಂತ ಕುಂದಾಪ್ರ ಕನ್ನಡ ತೀರ ಭಿನ್ನವಾಗಿದ್ದು ಹಳೇ ಕನ್ನಡಕ್ಕೆ ತೀರಾ ಹತ್ತಿರವಾದುದು. ಕಡಿಮೆ ಪದಗಳಲ್ಲಿ ಬಹು ಅರ್ಥದ ವಿವರ ತುಂಬಿರುವ ಈ ಭಾಷೆ ನಮ್ಮ ಕುಂದಾಪ್ರ ಕನ್ನಡ ಎನ್ನಲು ನಮಗೆಲ್ಲ ಹೆಮ್ಮೆಯ ಸಂಗತಿ. ಕುಂದಾಪುರ ಪ್ರದೇಶದ ಮಂದಿ ಬದುಕು ಕಟ್ಟಿಕೊಳ್ಳಲು ದೂರದ ಊರುಗಳಿಗೆ ತೆರಳಿದರೂ ಭಾಷೆಗಾಗಿ ಒಂದಾಗುವ ಕೆಲಸ ಉತ್ತಮವಾದುದು.

— ನೀಲಾವರ ಸುರೇಂದ್ರ ಅಡಿಗ, ಅಧ್ಯಕ್ಷ, ಕಸಾಪ ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net