ಪಡುಬಿದ್ರಿ ದೇವಸ್ಥಾನದಲ್ಲಿ ರಥಾರೋಹಣ ಸಂಪನ್ನ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ತಾನದ ವರ್ಷಾವಧಿ ಉತ್ಸವ ಅಂಗವಾಗಿ ಹಗಲು ರಥಾರೋಹಣ ನೆರವೇರಿತು.
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ತಾನದ ವರ್ಷಾವಧಿ ಉತ್ಸವ ಅಂಗವಾಗಿ ಹಗಲು ರಥಾರೋಹಣ ನೆರವೇರಿತು.
Published on

ಪ್ರಮುಖ ಮುಖ್ಯಾಂಶಗಳು

  • ವಿಶೇಷ ಪೂಜೆ, ಉತ್ಸವ ಬಲಿ
  • ದೇವರಿಗೆ ವಿಶೇಷ ಅಲಂಕಾರ
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಸಮಗ್ರ ಜೀಣೋರ್ದ್ಧಾರಗೊಂಡು ಬ್ರಹ್ಮಕಲಶೋತ್ಸವ ಬಳಿಕ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವ ಅಂಗವಾಗಿ ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಮಂಗಳವಾರ ರಥಾರೋಹಣ ವೈಭವದಿಂದ ಸಂಪನ್ನಗೊಂಡಿತು.
ರಥೋತ್ಸವ ಅಂಗವಾಗಿ ತರಂಗಿಣಿ ಮಿತ್ರಮಂಡಳಿಯಿಂದ ನಡೆದ ಪುಷ್ಪಾಲಂಕಾರ ಭಕ್ತರ ಗಮನ ಸೆಳೆಯಿತು.

ಮಹಾಪೂಜೆ, ಪಲ್ಲಪೂಜಾದಿ ಉತ್ಸವ

ಕ್ಷೇತ್ರದ ತಂತ್ರಿ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ ನೇತೃತ್ವದಲ್ಲಿ ದೇವರಿಗೆ ಉತ್ಸವ ಕಾಲದ ವಿಶೇಷ ಪೂಜಾದಿಗಳು, ನಿತ್ಯ ಬಲಿ, ಮಹಾಪೂಜೆ ಬಳಿಕ ಪಲ್ಲಪೂಜಾದಿಗಳು ನಡೆದು, ರಥ ಶುದ್ಧಿಯ ನಂತರ ಉತ್ಸವ ಬಲಿ ನೆರವೇರಿತು. ಉತ್ಸವ ಅಂಗವಾಗಿ ದೇವಸ್ಥಾನ ಹಾಗೂ ದೇವರನ್ನು ವಿಶೇಷವಾಗಿ ಹೂವುಗಳಿಂದ ಅಲಂಕರಿಸಲಾಯಿತು.

ಗಣ್ಯರ ಉಪಸ್ಥಿತಿ

ದೇಗುಲದ ಆನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ್​ ಅರಸ್​ ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಕೊರ್ನಾಯ ಶ್ರೀಪತಿ ರಾವ್​, ಕಾರ್ಯನಿರ್ವಹಣಾಧಿಕಾರಿ ಕೆ.ರಾಜಗೋಪಾಲ ಉಪಾಧ್ಯಾಯ, ಅರ್ಚಕರಾದ ವೈ.ಗುರುರಾಜ ಭಟ್​, ಪದ್ಮನಾಭ ಭಟ್​, ಗಣಪತಿ ಭಟ್​, ಕೃಷ್ಣಾಪುರ ಶಾಖಾ ಮಠದ ಶ್ರೀನಿವಾಸ ಉಪಾಧ್ಯಾಯ, ವೈ.ಎನ್​.ರಾಮಚಂದ್ರ ರಾವ್​, ನಡ್ಸಾಲುಗುತ್ತು ಶ್ರೀನಾಥ ಹೆಗ್ಡೆ, ದಾರಡಗುತ್ತು ಉದಯಹೆಗ್ಡೆ, ಬಗ್ಗೇಡಿಗುತ್ತು ಶೇಖರ ಶೆಟ್ಟಿ, ಅವರಾಲು ಕಂಕಣಗುತ್ತು ಕೃಷ್ಣ ಶೆಟ್ಟಿ, ಪೇಟೆಮನೆ ಅನಿಲ್​ಕುಮಾರ್​ ಶೆಟ್ಟಿ, ವೈ.ಸುಕುಮಾರ್​, ಅಶೋಕ್​ ಸಾಲ್ಯಾನ್​, ನವೀನ್​ಚಂದ್ರ ಜೆ.ಶೆಟ್ಟಿ, ನವೀನ್​ ಎನ್​.ಶೆಟ್ಟಿ, ಮಿಥುನ್​ ಹೆಗ್ಡೆ, ವಿಶ್ವಾಸ್​ ಅಮೀನ್​, ಭರತ್​ ದೇವಾಡಿಗ, ಮಾಧವ ಶೆಟ್ಟಿ, ರಮಾಕಾಂತ ರಾವ್​, ಜೀಣೋರ್ದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಮಹಾರಥೋತ್ಸವ, ಭೂತಬಲಿ

ರಾತ್ರಿ ಮಹಾರಥೋತ್ಸವ, ಭೂತಬಲಿ, ಕವಾಟಬಂಧನದ ಧಾರ್ಮಿಕ ವಿಧಿಗಳು ನೆರವೇರಿದವು.

ತರಂಗಿಣಿ ಮಿತ್ರಮಂಡಳಿಯಿಂದ ಪುಷ್ಪಾಲಂಕಾರ

ವಾರ್ಷಿಕ ರಥೋತ್ಸವ ಅಂಗವಾಗಿ ರಾಮಚಂದ್ರ ರಾವ್​ ಪಿ.ಕೆ. ನೇತೃತ್ವದಲ್ಲಿ, ತರಂಗಿಣಿ ಮಿತ್ರ ಮಂಡಳಿ ವತಿಯಿಂದ 32ನೇ ವರ್ಷದ ಪುಷ್ಪಾಲಂಕಾರ ನಡೆಯಿತು. ತರಂಗಿಣಿ ಮಿತ್ರ ಮಂಡಳಿ ಅಧ್ಯಕ್ಷ ರಮಾಕಾಂತ್​ ರಾವ್​, ಕಾರ್ಯದರ್ಶಿ ಗಣೇಶ್​ ರಾವ್​ ವೈ.ಎಸ್​., ಕೋಶಾಧಿಕಾರಿ ಗೋವಿಂದ್​ ರಾವ್​, ಚಂದ್ರಶೇಖರ್​ ರಾವ್​, ಶ್ರೀಧರ್​ ಆಚಾರ್​, ಪ್ರಶಾಂತ್​ ಉಪಾಧ್ಯಾಯ, ರಾವೇಂದ್ರ ರಾವ್​ ಪಿ.ಕೆ., ಜಗನ್ನಾಥ ರಾವ್​, ವಿಷ್ಣುಮೂರ್ತಿ ಮಂಜಿತ್ತಾಯ, ಸುಮಂತ್​ ಉಪಾಧ್ಯಾಯ, ಅಶ್ವಥ್​, ಶರತ್​ ಉಪಾಧ್ಯಾಯ, ಅನಿರುದ್ಧ್​, ಬೈಲ ಪ್ರಸನ್ನ ರಾವ್​, ಸುಬ್ರಹ್ಮಣ್ಯ ಶಾನಭಾಗ್​, ವೆಂಕಟೇಶ್​ ಶಾನಭಾಗ್​ ಅಲಂಕಾರ ಸೇವೆಯಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net