ಜನಮನದಲ್ಲಿ ಗಟ್ಟಿಯಾಗಿ ನೆಲೆಯೂರಿದೆ ರಾಮಾಯಣ

ಕಾಂತಾವರ ಕನ್ನಡ ಸಂಘ, ಅಲ್ಲಮಪ್ರಭು ಪೀಠ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕದ ಸಹಭಾಗಿತ್ವದಲ್ಲಿ ಪ್ರತೀ ತಿಂಗಳು ನಡೆಯುವ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ ಉಪನ್ಯಾಸ ಮಾಲಿಕೆ
ಕಾಂತಾವರ ಕನ್ನಡ ಸಂಘ, ಅಲ್ಲಮಪ್ರಭು ಪೀಠ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕದ ಸಹಭಾಗಿತ್ವದಲ್ಲಿ ಪ್ರತೀ ತಿಂಗಳು ನಡೆಯುವ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ ಉಪನ್ಯಾಸ ಮಾಲಿಕೆ
Published on

ಕಾರ್ಕಳ:ಕರುಣಾರಸಪೂರಿತವಾದ ರಾಮಾಯಣ ಮನುಷ್ಯಮನುಷ್ಯರ ಹೃದಯವನ್ನು ಬೆಸೆಯುವ,ಬಾಂಧವ್ಯವನ್ನುಗಟ್ಟಿಗೊಳಿಸುವಂತಹ ಕೆಲಸವನ್ನುಮಾಡುತ್ತದೆ.24 ಸಾವಿರಶ್ಲೋಕಗಳ ರಾಮಾಯಣದಲ್ಲಿ ಪ್ರತಿಯೊಂದುಅಕ್ಷರವೂ ಮಹತ್ವಪೂರ್ಣವಾದುದುಮತ್ತು ಇಡೀ ರಾಮಾಯಣವು ಕರುಣಾರಸಪೂರಿತವಾಗಿರುವುದರಿಂದಲೇ ಅದುಇಂದಿಗೂ ಜನಮನದಲ್ಲಿ ಗಟ್ಟಿಯಾಗಿನೆಲೆಯೂರಿದೆ ಎಂದು ವಿದ್ವಾಂಸಡಾ.ರಾಘವೇಂದ್ರರಾವ್ ಪಡುಬಿದ್ರಿ ಹೇಳಿದರು.

ಕಾಂತಾವರಕನ್ನಡ ಸಂಘ,ಅಲ್ಲಮಪ್ರಭುಪೀಠ ಮತ್ತು ಅಖಿಲ ಭಾರತೀಯ ಸಾಹಿತ್ಯಪರಿಷದ್ ಕಾರ್ಕಳ ತಾಲೂಕು ಘಟಕದಸಹಭಾಗಿತ್ವದಲ್ಲಿ ಪ್ರತೀ ತಿಂಗಳುನಡೆಯುವ ಶ್ರೀಮದ್ ವಾಲ್ಮೀಕಿರಾಮಾಯಣ ದರ್ಶನ ಉಪನ್ಯಾಸ ಮಾಲಿಕೆಯಲ್ಲಿವಾನರ ವೀರರ ಸ್ನೇಹಸೇತು ಎಂಬ ವಿಷಯದಕುರಿತು ಉಪನ್ಯಾಸ ನೀಡಿದರು.

ಇತ್ತೀಚೆಗೆಅಗಲಿದ ಸಾಹಿತಿ ಡಾ.ಎಸ್.ಎಲ್.ಭೈರಪ್ಪಹಾಗೂ ಕಾರ್ಕಳದ ಹಿರಿಯ ವಕೀಲಎಂ.ಕೆ.ವಿಜಯಕುಮಾರ್ಅವರಿಗೆ ಶ್ರದ್ಧಾಂದಜಲಿ ಸಲ್ಲಿಸಲಾಯಿತು.

ಡಾ.ನಾ.ಮೊಗಸಾಲೆ,ನಿತ್ಯಾನಂದಪೈ,ಮಿತ್ರಪ್ರಭಾಹೆಗ್ಡೆ ಉಪಸ್ಥಿತರಿದ್ದರು.ಶಾರ್ವರಿಪ್ರಾರ್ಥಿಸಿದರು.ಸುಲೋಚನಾಬಿ.ವಿ.ನಿರೂಪಿಸಿದರು.ಸದಾನಂದನಾರಾವಿ ಸ್ವಾಗತಿಸಿದರು.ಗಣೇಶ್ಜಾಲ್ಸೂರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net