ಪ್ರವಾಸೋದ್ಯಮಕ್ಕೆ ‘ನಗರ ಅರಣ್ಯ’ಬಲ

 ಸಾಮಾಜಿಕ ಅರಣ್ಯ ಇಲಾಖೆಯ ನಗರ ಅರಣ್ಯಯೋಜನೆ ಅನ್ವಯ ಅಭಿವೃದ್ಧಿಪಡಿಸಲಾಗಿರುವ ಪಳ್ಳಂ ಕಾಂಡ್ಲಾ ನೆಡುತೋಪು ಪ್ರದೇಶಕ್ಕೆ ಜಿಲ್ಲಾಧಿಕಾರಿ ನೇತೃತ್ವದ ತಂಡದ ಭೇಟಿ ನೀಡಿತು.
ಸಾಮಾಜಿಕ ಅರಣ್ಯ ಇಲಾಖೆಯ ನಗರ ಅರಣ್ಯಯೋಜನೆ ಅನ್ವಯ ಅಭಿವೃದ್ಧಿಪಡಿಸಲಾಗಿರುವ ಪಳ್ಳಂ ಕಾಂಡ್ಲಾ ನೆಡುತೋಪು ಪ್ರದೇಶಕ್ಕೆ ಜಿಲ್ಲಾಧಿಕಾರಿ ನೇತೃತ್ವದ ತಂಡದ ಭೇಟಿ ನೀಡಿತು.
Published on
ಪುರುಷೋತ್ತಮ ಪೆರ್ಲ ಕಾಸರಗೋಡು
ನಗರದಲ್ಲಿ ಪ್ರಕೃತಿ ಸ್ನೇಹಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕೊಡುಗೆ ನೀಡುವ ಸಾವಾಜಿಕ ಅರಣ್ಯ ಇಲಾಖೆಯ ‘ನಗರ ಅರಣ್ಯ’ಯೋಜನೆಯೊಂದು ಕಾಸರಗೋಡು ನಗರದಲ್ಲಿ ಸದ್ದಿಲ್ಲದೆ ತಲೆಯೆತ್ತುತ್ತಿದೆ.
ಕಾಸರಗೋಡು ನಗರದ ಪಳ್ಳಂ ಕಸಬಾ ಸೇತುವೆ ಬಳಿ 21 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಕಾಂಡ್ಲಾ ವನವನ್ನು ನಗರ ಅರಣ್ಯವಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಪ್ರವಾಸಿಗರ ಆಕರ್ಷಣೆಯ ಕೇಂದ್ರವನ್ನಾಗಿ ವಾರ್ಪಡಿಸಲಾಗುತ್ತಿದೆ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅನ್ವಯ ನಗರ ಅರಣ್ಯ ಪರಿಕಲ್ಪನೆಯನ್ನು ಪಳ್ಳಂ ಕಡಪ್ಪುರದಲ್ಲಿ ವಿನ್ಯಾಸಗೊಳಿಸಲಾಗಿದೆ. ತ್ಯಾಜ್ಯ ಕೊಂಪೆಯಾಗಿ, ಕೊಳಚೆನೀರಿನಿಂದ ಆವೃತವಾಗಿದ್ದ ಈ ಪ್ರದೇಶದಲ್ಲಿ ಕಾಂಡ್ಲಾವನ ಬೆಳೆಸುವ ಮೂಲಕ ಪಳ್ಳಂ ಪ್ರದೇಶದ ಚಹರೆಯೇ ಬದಲಾಯಿಸಲಾಗಿದೆ.
ನಗರ ಪ್ರದೇಶದಲ್ಲಿ ಅರಣ್ಯ ಬೆಳೆಸುವುದರ ಜತೆಗೆ ಜನಾಕರ್ಷಣೆ ಕೇಂದ್ರವಾಗಿ ಬೆಳೆಸುವ ನಿಟ್ಟಿನಲ್ಲಿ ನಗರ ಅರಣ್ಯ ಎಂಬ ಮಹತ್ವದ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಪ್ರದೇಶದಲ್ಲಿ ಸ್ವಚ್ಛತೆ ಪಾಲಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ತ್ಯಾಜ್ಯ ಎಸೆಯುವವರನ್ನು ಪತ್ತೆಹಚ್ಚಲು ಅಲ್ಲಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಕಸ ಎಸೆಯುವವರ ವಿರುದ್ಧ ಅರಣ್ಯ ಇಲಾಖೆ ಕಠಿಣ ಕ್ರಮಕೈಗೊಳ್ಳಲಿದೆ. ಇದಕ್ಕಾಗಿ ಪ್ರತ್ಯೇಕ ಎನ್‌ೆರ್ಸ್‌ಮೆಂಟ್ ತಂಡವನ್ನೂ ರಚಿಸಲಾಗಿದೆ.

ಜಿಲ್ಲಾಧಿಕಾರಿ ಅವಲೋಕನ

ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ ನಗರ ಅರಣ್ಯ ಯೋಜನೆಯನ್ವಯ ನಿರ್ವಾಣಗೊಳ್ಳುತ್ತಿರುವ ಸುಂದರ ಉದ್ಯಾನವನದ ಕಾಮಗಾರಿ ಅವಲೋಕನ ನಡೆಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ತಂಡ ಭೇಟಿ ನೀಡಿತು. ಕಾಸರಗೋಡು ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ, ಉಪಾಧ್ಯಕ್ಷ ಕೆ.ಎಂ. ಹನೀಫ್, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೆಹ್ರುನ್ನಿಸಾ ಹಮೀದ್, ಸಮೀನಾ ಮುಜೀಬ್, ಜಾಫರ್ ಕವಾಲ್, ಹಮೀದ್ ಬಾದ್ರ, ನಗರಸಭೆ ಕಾರ್ಯದರ್ಶಿ ಕೆ.ಶಾಜು, ನಗರಸಭಾ ಕಡಪ್ಪುರ ದಕ್ಷಿಣ ವಾರ್ಡ್ ಸದಸ್ಯೆ ರಂಜಿಶಾ, ಕಾಸರಗೋಡು ತಹಸೀಲ್ದಾರ್ ಶೆರಿಲ್ ಬಾಬು, ಕಾಸರಗೋಡು ವಿಶೇಷ ಗ್ರಾಮಾಧಿಕಾರಿ ಉಮ್ಮರ್ ಫಾರೂಕ್, ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಇ.ಕೆ.ಅರ್ಜುನನ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಾದ ಎ.ಅನೂಪ್, ನಿವ್ಯಾ, ಶುಚಿತ್ವ ಮಿಷನ್ ಸಂಯೋಜಕ ಪಿ.ಜಯನ್ ಮೊದಲಾದವರಿದ್ದರು.

ಯಾವ್ಯಾವ ಯೋಜನೆಗಳಿರಲಿವೆ ?

ನಗರ ಅರಣ್ಯ ಯೋಜನೆ ಅನ್ವಯ ತನ್ನ ಸೌಂದರ್ಯ ವೃದ್ಧಿಸಿಕೊಂಡಿರುವ ಪಳ್ಳಂ ಪ್ರದೇಶದಲ್ಲಿ ಪ್ರಸಕ್ತ ಟಿಕೆಟ್ ಕೌಂಟರ್, ಪಾಕಿರ್ಂಗ್ ಮತ್ತು ಶೌಚಗೃಹ ಸೌಲಭ್ಯ ಹೊಂದಿದೆ. ಕಾಲ್ನಡೆ ವಾರ್ಗಗಳು, ಕೆಫೆಟೇರಿಯಾಗಳು, ವಿದ್ಯುತ್ ದೀಪಗಳು ಮತ್ತು ತೇಲುವ ದೋಣಿಗಳನ್ನು ಸ್ಥಾಪಿಸುವ ಮೂಲಕ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುವ ಯೋಜನೆಯಿರಿಸಿಕೊಳ್ಳಲಾಗಿದೆ. ಜತೆಗೆ ನಗರಸಭೆಯು ಕಾಡಿನೊಳಗೆ ಮಕ್ಕಳಿಗಾಗಿ ಒಂದು ಸಣ್ಣ ಉದ್ಯಾನವನ ನಿರ್ವಾಣಕ್ಕೂ ಮುಂದಾಗಿದೆ.

ನಗರದ ಮಧ್ಯೆ ಒಂದು ಕಾಡು ಎಂಬ ಪರಿಕಲ್ಪನೆಯೊಂದಿಗೆ ನಗರ ಅರಣ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ. ನಗರ ಅರಣ್ಯ ನಿರ್ಮಾಣ ಶೀಘ್ರವೇ ಪೂರ್ತಿಗೊಳಿಸಿ ಪ್ರವಾಸಿ ತಾಣವನ್ನಾಗಿ ವಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸ್ವಚ್ಛತೆಗೆ ಆದ್ಯತೆ ನೀಡಿ, ನಗರ ಅರಣ್ಯ ಯೋಜನೆ ಅನ್ವಯ ಪಳ್ಳಂ ಕಾಂಡ್ಲಾ ಅರಣ್ಯ ಪ್ರದೇಶ ಅಭಿವೃದ್ಧಿಗೊಳಿಸಲಾಗುವುದು.

— ಶಾಹಿನಾ ಸಲೀಂ ಕಾಸರಗೋಡು ನಗರಸಭಾಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net