ಗೃಹಜ್ಯೋತಿ ಸೌಲಭ್ಯಕ್ಕೆ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಾಗುತ್ತಿದೆ. ಆಧಾರ್ ಕಾರ್ಡ್, ಮತದಾರರ ಗುರುತು ಚೀಟಿ, ಪಡಿತರ ಚೀಟಿ, ಭಾವಚಿತ್ರ ಮತ್ತು ಬಾಡಿಗೆ ಮನೆಯ ಕರಾರುಪತ್ರಗಳ ದಾಖಲೆ ಅಗತ್ಯ ಎಂದು ಮೆಸ್ಕಾಂ ಕಿರಿಯ ಅಭಿಯಂತ ನಿತೇಶ್ ಹೊಸಗದ್ದೆ ಮಾಹಿತಿ ನೀಡಿದರು. ಹೊಸ ಸಂಪರ್ಕಕ್ಕೆ 2880 ಚ.ಅ.ಗೆ ಒ.ಸಿ. ಮತ್ತು ಸಿ.ಸಿ. ನೀಡುವುದು ಅಗತ್ಯ. ಆದರೆ ಆ.15ರವರೆಗೆ ಸರ್ಕಾರ ವಿನಾಯಿತಿ ನೀಡಿದೆ. 1200 ಚದರ ಅಡಿ ಜಾಗಕ್ಕೆ ಈ ದಾಖಲೆ ಬೇಡ. ವಿದ್ಯುತ್ ತಂತಿ ತುಂಡಾಗಿ ಬಿದ್ದರೆ ಮುಟ್ಟಲು ಹೋಗದೆ ನಮಗೆ ಕರೆ ಮಾಡಿ ಎಂದು ತಿಳಿಸಿದ್ದು, ಮೆಸ್ಕಾಂಗೆ ಕರೆ ಮಾಡಲು ಹೇಳಬೇಡಿ, ಅಲ್ಲಿ ಕರೆ ಸ್ವೀಕರಿಸುವುದಿಲ್ಲ ಎಂದು ಸದಸ್ಯ ಮನೋಜ್ ಕಟ್ಟೆಮನೆ ವ್ಯಂಗ್ಯವಾಡಿದರು. ಇದು ಗಂಭೀರ ವಿಚಾರವಾಗಿದ್ದು, ವಿದ್ಯುತ್ ವಿಚಾರದಲ್ಲಿ ಯಾರೂ ಅಧಿಕಪ್ರಸಂಗ ಮಾಡಲು ಹೋಗಬೇಡಿ ಎಂದು ಉಪಾಧ್ಯಕ್ಷ ರವಿಶಂಕರ್‌ತಿಳಿಹೇಳಿದರು.