

ಆಸ್ತಿಕನ ಬದುಕಿನ ನಡೆಯ ಹಿಂದಿನ ದೈವಿ ಶ್ರದ್ಧೆ ಹಾಗೂ ನಂಬಿಕೆ ತಪ್ಪು ವಾಡಲು ಹಿಂಜರಿಯುವಂತೆ ವಾಡುತ್ತದೆ. ಕೈಮೀರಿ ತಪ್ಪುಗಳಾದಾಗಲೂ ಆತ ಪಶ್ಚಾತಾಪ ಪಡುತ್ತಾನೆ. ಜೀವನದಲ್ಲಿ ಧರ್ಮ, ಅಧರ್ಮ, ಪುಣ್ಯ, ಪಾಪದ ಕಲ್ಪನೆ ಇದ್ದರೆ ವಾತ್ರ ನಾವು ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ. ನಮ್ಮ ಇಚ್ಛೆ ಈಡೇರಬೇಕಾದರೆ ಅದಕ್ಕೆ ಪೂರಕವಾಗಿ ದೈವಿಚ್ಛೆಯೂ ಕೂಡಿಬರಬೇಕು. ಜ್ಞಾನ, ಭಕ್ತಿ, ವೈರಾಗ್ಯ ಮೊದಲಾದ ಸದ್ಗುಣಗಳ ಜತೆಗೂಡಿ ವಾಡುವ ನಾಮ ಸ್ಮರಣೆಯಿಂದ ಭಗವಂತನನ್ನು ತೃಪ್ತಿಪಡಿಸಲು ಸಾಧ್ಯ. ಬಡಾಕೆರೆ ಲೋಕೇಶ ಅಡಿಗ