ಪ್ರಯಾಣಿಕರ ತಂಗುದಾಣ ಪೊದೆಗಳಿಂದಾವೃತ

ಪೊದೆಗಳಿಂದ ಆವೃತವಾಗಿರುವ ಕುಂಬಳೆ ದೇವಿ ನಗರದ ಬಸ್ ಶೆಲ್ಟರ್.
ಪೊದೆಗಳಿಂದ ಆವೃತವಾಗಿರುವ ಕುಂಬಳೆ ದೇವಿ ನಗರದ ಬಸ್ ಶೆಲ್ಟರ್.
Published on

ಕುಂಬಳೆ: ಕುಂಬಳೆ ದೇವಿ ನಗರ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯ ಉದ್ದಕ್ಕೂ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣಗಳು ಗಿಡಗಂಟಿಗಳಿಂದ ಆವೃತಗೊಂಡಿದ್ದು ಹಾವುಗಳ ಉಪಟಳ ಹೆಚ್ಚಾಗಿದೆ.

ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಭಯದಲ್ಲೇ ಬಸ್‌ಗಾಗಿ ಕಾಯುವಂತಾಗಿದೆ. ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳದಿರುವುದು ಮಳೆಗಾಲದಲ್ಲಿ ಪ್ರಯಾಣಿಕರಿಗೆ ದೊಡ್ಡ ಸಂಕಷ್ಟವನ್ನುಂಟು ಮಾಡಿದೆ.

ಸ್ವಚ್ಛತೆ ಇಲ್ಲ

ರಾಷ್ಟ್ರೀಯ ಹೆದ್ದಾರಿಗಳು, ಸರ್ವೀಸ್ ರೋಡ್‌ಗಳು ಮತ್ತು ಅಂಡರ್‌ಪಾಸ್‌ಗಳನ್ನು ಸ್ವಚ್ಛಗೊಳಿಸಲು ಕಾಮಗಾರಿ ಗುತ್ತಿಗೆ ಕಂಪನಿ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನೈರ್ಮಲ್ಯ ಕಾರ್ಮಿಕರು ತಿಂಗಳಿಗೊಮ್ಮೆ ಇಲ್ಲಿ ಗುಡಿಸುತ್ತಾರೆ. ಆದರೆ ಸರ್ವೀಸ್ ರಸ್ತೆಯ ಉದ್ದಕ್ಕೂ ಇರುವ ಬಸ್ ಶೆಲ್ಟರ್‌ಗಳ ಬಳಿ ಬೆಳೆದಿರುವ ಪೊದೆಗಳನ್ನು ಕಡಿಯದೆ ಹಾಗೇ ಬಿಡುವ ಕಾರಣ ಸಮಸ್ಯೆ ಹೆಚ್ಚಾಗಿದೆ.

ಸೋರುತ್ತಿರುವ ಛಾವಣಿ

ಗಾಳಿ ಸಹಿತ ಭಾರಿ ಮಳೆ ಬಂದಾಗ ಕೆಲವು ಬಸ್ ತಂಗುದಾಣಗಳ ಆಸನಗಳ ಮೇಲೆ ನೀರು ಬೀಳುತ್ತದೆ. ಇದರಿಂದಾಗಿ ವೃದ್ಧರು ಮತ್ತು ಮಕ್ಕಳೊಂದಿಗೆ ಬಸ್‌ಗೆ ಕಾಯುವವರು ಕುಳಿತುಕೊಳ್ಳಲು ಸಾಧ್ಯವಾಗದ ಸ್ಥಿತಿ ಕಂಡುಬಂದಿದೆ.

ಬಸ್ ಶೆಲ್ಟರ್‌ಗಳನ್ನು ಸ್ವಚ್ಛವಾಗಿಡಲು ಮತ್ತು ಮಳೆಗಾಲದಲ್ಲಿ ಮಳೆನೀರು ಒಳಗೆ ಬೀಳದಂತೆ ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮತ್ತು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net