ಹೆಜ್ಜೆ ತಪ್ಪುತ್ತಿದೆ ಕನ್ನಡ ಭಾಷೆಯ ಗತಿ, ನಡೆ

ಉಡುಪಿಯಲ್ಲಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರಿಗೆ ಉಪಾಧ್ಯಾಯ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಎನ್​.ಟಿ. ಭಟ್​, ಪ್ರೊ.ವನಿತಾ ಮಯ್ಯ, ಡಾ. ಪದ್ಮನಾಭ ಕೆ., ಡಾ. ಬಿ.ಜಗದೀಶ್​ ಶೆಟ್ಟಿ ಇದ್ದರು.
ಉಡುಪಿಯಲ್ಲಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರಿಗೆ ಉಪಾಧ್ಯಾಯ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಎನ್​.ಟಿ. ಭಟ್​, ಪ್ರೊ.ವನಿತಾ ಮಯ್ಯ, ಡಾ. ಪದ್ಮನಾಭ ಕೆ., ಡಾ. ಬಿ.ಜಗದೀಶ್​ ಶೆಟ್ಟಿ ಇದ್ದರು.
Published on

ಉಪಾಧ್ಯಾಯ ಸ್ಮರಣಾರ್ಥ ಪ್ರಶಸ್ತಿ ಸ್ವೀಕಾರ

ಉಡುಪಿ: ಸಕಾರಾತ್ಮಕ ಆಲೋಚನೆ, ಇಚ್ಛಾಶಕ್ತಿಯ ಮೂಲಕ ಇಂಗ್ಲಿಷ್​ನ ಶಬ್ದಗಳಿಗೆ ಪರ್ಯಾಯವಾಗಿ ಕನ್ನಡದಲ್ಲೇ ಇರುವ ಪದ ಅಥವಾ ಹೊಸ ಪದಗಳ ಸೃಷ್ಟಿಯಾಗಬೇಕಿದೆ. ಅಂತಹ ಹೊಸ ಚಿಗುರು ಮೂಡಿಸುವ ಕಾರ್ಯ ಶಿಕ್ಷಕರಿಂದ ಆಗಬೇಕಿದೆ. ಏಕೆಂದರೆ, ಭಾಷಾ ತಜ್ಞರುಗಳು ಇರುವ ನಾಡಿನಲ್ಲೇ ಕನ್ನಡ ಭಾಷೆಯ ಗತಿ, ನಡೆ, ಹೆಜ್ಜೆ ತಪ್ಪುತ್ತಿದೆ. ಶಿಕ್ಷಣದ ಮೂಲಕ ವಿದ್ಯಾರ್ಥಿಗಳಿಗೆ ಸರಿಯಾಗಿ ಭಾಷಾ ಸಂವಹನ ಕಲಿಸದಿದ್ದರೆ ಭವಿಷ್ಯದಲ್ಲಿ ತೊಡಕಾಗಲಿದೆ ಎಂದು ಕವಿ, ವಿದ್ವಾಂಸ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ (ಮಾಹೆ) ವತಿಯಿಂದ ಶನಿವಾರ (ನ.29) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಯು.ಪಿ. ಉಪಾಧ್ಯಾಯ ಹಾಗೂ ಡಾ. ಸುಶೀಲಾ ಉಪಾಧ್ಯಾಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ವಾಂಸ ಹಾಗೂ ಜರ್ಮನ್​ ಭಾಷಾ ತಜ್ಞ ಡಾ. ಎನ್.ಟಿ. ಭಟ್​ ಪ್ರಶಸ್ತಿ ಪ್ರದಾನ ಮಾಡಿದರು. ವಿದ್ವಾಂಸ ಡಾ. ಪದ್ಮನಾಭ ಕೆ. ಅಭಿನಂದನಾ ಮಾತುಗಳನ್ನಾಡಿದರು.
ನಾಗರಾಜ ಶಂಕರನಾರಾಯಣ ಪ್ರಾರ್ಥಿಸಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್​ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಎಸ್​.ಆರ್​. ಅರುಣ್​ ಕಾರ್ಯಕ್ರಮ ನಿರೂಪಿಸಿದರು.
"

ರಾಜ್ಯದಲ್ಲಿ ಕರಾವಳಿ ಯಕ್ಷಗಾನದ ಕುರಿತಾಗಿ 60 ಪಿಎಚ್​.ಡಿ, ವಿವಿಧ ವಿವಿಗಳಲ್ಲಿ ದಾಸ ಸಾಹಿತ್ಯದ ಬಗ್ಗೆ 100ಕ್ಕೂ ಅಧಿಕ ಪಿಎಚ್​.ಡಿ ಅಧ್ಯಯನ ಆಗಿದೆ. ಆದರೆ, ಮಂಗಳೂರು ವಿವಿಯಲ್ಲಿ ದಾಸ ಸಾಹಿತ್ಯ ಕುರಿತು ಒಂದೇ ಒಂದು ಪಿಎಚ್​.ಡಿ ಆಗಿಲ್ಲ. ಸಂಶೋಧನೆಗೆ ಅಪಾರ ಅವಕಾಶ, ಸಾಮಗ್ರಿಗಳಿದ್ದು ಯುವ ಸಮುದಾಯ ಗಂಭೀರವಾಗಿ ಪರಿಗಣಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net