ಹಳೇ ವಿದ್ಯಾರ್ಥಿಗಳ ಸಹಕಾರದಿಂದ ಸಂಸ್ಥೆ ಬೆಳವಣಿಗೆ

ಮೂಲ್ಕಿ ಸುಂದರರಾಮ್ ಶೆಟ್ಟಿ ಕಾಲೇಜಿನಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಲಾಯಿತು. ಪ್ರಮುಖರಾದ ಮಟ್ಟಾರು ರತ್ನಾಕರ ಹೆಗ್ಡೆ, ಪ್ರೊ.ವೈ.ಭಾಸ್ಕರ ಶೆಟ್ಟಿ, ಅಶೋಕ್ ಶೆಟ್ಟಿ ಮೊದಲಾದವರಿದ್ದರು.
ಮೂಲ್ಕಿ ಸುಂದರರಾಮ್ ಶೆಟ್ಟಿ ಕಾಲೇಜಿನಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಲಾಯಿತು. ಪ್ರಮುಖರಾದ ಮಟ್ಟಾರು ರತ್ನಾಕರ ಹೆಗ್ಡೆ, ಪ್ರೊ.ವೈ.ಭಾಸ್ಕರ ಶೆಟ್ಟಿ, ಅಶೋಕ್ ಶೆಟ್ಟಿ ಮೊದಲಾದವರಿದ್ದರು.
Published on
ಶಿರ್ವ: ಇಪ್ಪತ್ತೈದು ವರ್ಷಗಳ ನಂತರ ತಾವು ಕಲಿತ ಕಾಲೇಜಿನಲ್ಲಿ ಹಳೇ ವಿದ್ಯಾರ್ಥಿಗಳು ಕಾರ್ಯಕ್ರಮ ಸಂಘಟಿಸಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮ ಸಂಸ್ಥೆಯ ಬೆಳವಣಿಗೆಗೆ ತುಂಬಾ ಸಹಕಾರಿಯಾಗಲಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.
ಶಿರ್ವದ ಮೂಲ್ಕಿ ಸುಂದರರಾಮ್ ಶೆಟ್ಟಿ ಕಾಲೇಜಿನ 2003-04ನೇ ವರ್ಷದ ಅಂತಿಮ ಬಿ.ಕಾಂ. ಕೋರ್ಸ್ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.
ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯರು ಸದುದ್ದೇಶದಿಂದ ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳನ್ನು ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಉಳಿಸಿ ಬೆಳೆಸುವುದು ಕಷ್ಟವಾಗುತ್ತಿದೆ. ಹಳೇ ವಿದ್ಯಾರ್ಥಿಗಳ ಇಂತಹ ಕಾರ್ಯಕ್ರಮ ಮತ್ತು ಕೊಡುಗೆ ಸಂಸ್ಥೆಗಳನ್ನು ಪುನಃಶ್ಚೇತನಗೊಳಿಸಲು ಶಕ್ತಿ ತುಂಬುತ್ತದೆ ಎಂದರು.
ದೇಶ-ವಿದೇಶದಲ್ಲಿರುವ 56 ವಿದ್ಯಾರ್ಥಿಗಳನ್ನು 25 ವರ್ಷಗಳ ನಂತರ ಸಂಪರ್ಕಿಸಿ ಕಾರ್ಯಕ್ರಮ ಸಂಘಟಿಸಿದ ವಿದೇಶದಲ್ಲಿರುವ ಹಳೇವಿದ್ಯಾರ್ಥಿ ಅಶೋಕ್ ಶೆಟ್ಟಿ ಮತ್ತು ಅವರ ತಂಡದವರನ್ನು ಆಡಳಿತ ಮಂಡಳಿ ವತಿಯಿಂದ ಅಭಿನಂದಿಸಲಾಯಿತು. ಕಾಲೇಜಿನ ಮಧ್ಯಾಹ್ನದ ಬಿಸಿಯೂಟದ ಯೋಜನೆಗೆ ಹಳೇ ವಿದ್ಯಾರ್ಥಿಗಳು 1 ಲಕ್ಷ 50 ಸಾವಿರ ರೂ. ನಗದು ಕೊಡುಗೆ ನೀಡಿದರು. 2003-04ನೇ ಶೈಕ್ಷಣಿಕ ವರ್ಷದ ಬೋಧಕ-ಬೋಧಕೇತರ ವೃಂದದವರನ್ನು ಸನ್ಮಾನಿಸಲಾಯಿತು.
ಹಳೇವಿದ್ಯಾರ್ಥಿ ಅಶೋಕ್ ಶೆಟ್ಟಿ ಸ್ವಾಗತಿಸಿದರು. ಪ್ರಾಂಶುಪಾಲ ಡಾ.ಮಿಥುನ್ ಚಕ್ರವರ್ತಿ ಪ್ರಾಸ್ತಾವಿಸಿದರು. ಹಳೇ ವಿದ್ಯಾರ್ಥಿನಿ ರಾಧಾ ನಿರೂಪಿಸಿದರು. ಪ್ರಾಧ್ಯಾಪಕಿ ಡಾ.ಸೋನಾ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net