ಸೀಮೆಯ ಏಕೈಕ ಪ್ರತಿಷ್ಠಿತ ಕಂಬಳ

ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳಕ್ಕೆ ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ.ಪದ್ಮಪ್ರಸಾದ ಅಜಿಲ ಚಾಲನೆ ನೀಡಿದರು. ಸಮಿತಿ ಗೌರವಾಧ್ಯಕ್ಷ ರಕ್ಷಿತ್ ಶಿವರಾಂ, ಅಧ್ಯಕ್ಷ ನಿತೀಶ್ ಎಚ್.ಕೋಟ್ಯಾನ್, ಸುರೇಶ್ ಕುಮಾರ್ ಆರಿಗ ಮತ್ತಿತರರಿದ್ದರು.
ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳಕ್ಕೆ ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ.ಪದ್ಮಪ್ರಸಾದ ಅಜಿಲ ಚಾಲನೆ ನೀಡಿದರು. ಸಮಿತಿ ಗೌರವಾಧ್ಯಕ್ಷ ರಕ್ಷಿತ್ ಶಿವರಾಂ, ಅಧ್ಯಕ್ಷ ನಿತೀಶ್ ಎಚ್.ಕೋಟ್ಯಾನ್, ಸುರೇಶ್ ಕುಮಾರ್ ಆರಿಗ ಮತ್ತಿತರರಿದ್ದರು.
Published on
ಬೆಳ್ತಂಗಡಿ: ವೇಣೂರು-ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳ ಸೀಮೆಯ ಏಕೈಕ ಪ್ರತಿಷ್ಠಿತ ಕಂಬಳ ಆಗಿದೆ. ವಸಂತ ಬಂಗೇರ ಗೌರವಾಧ್ಯಕ್ಷತೆಯಲ್ಲಿ ತುಂಬಾ ವ್ಯವಸ್ಥಿತವಾಗಿ ನಡೆಯುತ್ತಿದ್ದ ಕಂಬಳವನ್ನು ಮುನ್ನಡೆಸುವ ಬಗ್ಗೆ ಭಯ ಕಾಡಿತ್ತು. ಆದರೆ ಇದೀಗ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಬಹಳಷ್ಟು ಅಚ್ಚುಕಟ್ಟಾಗಿ ಏರ್ಪಡಿಸಲಾಗಿದೆ. ಗಣಪತಿ ಸ್ತುತಿಯೊಂದಿಗೆ ಆರಂಭವಾದ ಗ್ರಾಮೀಣ ಕ್ರೀಡೆ ಯಾವುದೇ ವಿಘ್ನ ಬರದೆ ಸಾಂಗವಾಗಿ ನೆರವೇರಲಿ ಎಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ.ಪದ್ಮಪ್ರಸಾದ ಅಜಿಲ ಹೇಳಿದರು.
ಹೊನಲು ಬೆಳಕಿನ 33ನೇ ವಷರ್ದ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳಕ್ಕೆ ಚಾಲನೆ ನೀಡಿ ಮಾತನಾಡಿದರು.
ವೇಣೂರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾ.ಎಡ್ವಿನ್ ಸಂತೋಷ್ ಮೊರಾಸ್, ನಿವೃತ್ತ ಎಸ್‌ಪಿ ಪೀತಾಂಬರ ಹೇರಾಜೆ, ಬೆಳ್ತಂಗಡಿ ವಕೀಲರ ಸಂಘ ಅಧ್ಯಕ್ಷ ಅಲೋಶಿಯಸ್ ಎಸ್.ಲೋಬೊ, ಪೆರಾಡಿ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸತೀಶ್ ಕೆ.ಕಾಶಿಪಟ್ಣ, ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲ ಮನೋಹರ ಕುಮಾರ್, ವಿ.ಪ್ರಭಾಕರ ಹೆಗ್ಡೆ ಮಾತನಾಡಿದರು.
ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಎಚ್.ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಸುರೇಶ್ ಕುಮಾರ್ ಆರಿಗ ಪೆರ್ಮಾಣುಗುತ್ತು, ವಂದನಾ ಭಂಡಾರಿ, ದಿನೇಶ್ ಮೂಲ್ಯ, ವಿಮಲಚಂದ್ರ ಕೋಟ್ಯಾನ್, ಗುರುರಾಜ್ ಗುರಿಪಳ್ಳ, ಪ್ರಕಾಶ್ ಕೋಟ್ಯಾನ್ ನಾರಾವಿ, ಹಿರಿಯ ವಕೀಲ ಅಜಿತ್ ಎನ್., ಬೆಳ್ತಂಗಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ವಲಯ ಅರಣ್ಯಾಧಿಕಾರಿ ಭರತ್ ಯು.ಜಿ., ಪಡಂಗಡಿ ಗ್ರಾಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶೆಟ್ಟಿ, ಮನೋಜ್ ಕೋಟ್ಯಾನ್, ಪದ್ಮನಾಭ ಸಾಲ್ಯಾನ್, ಕೇಶವ ಕೋರ್ಡೇಲು, ಗುಣವತಿ ಡಿ.ಕುಕ್ಕೇಡಿ, ತೇಜಾಕ್ಷಿ ಕುಕ್ಕೇಡಿ, ವಿನೋದಾ, ಹರಿಣಾಕ್ಷಿ, ಕಕ್ಯೆಪದವು ಕಂಬಳ ಸಮಿತಿ ಸಂಚಾಲಕ ರಂಜಿತ್ ಮೈರ, ಸತೀಶ್ ಹೆಗ್ಡೆ, ಕಂಬಳ ಸಮಿತಿ ಗೌರವಾಧ್ಯಕ್ಷ ರಕ್ಷಿತ್ ಶಿವರಾಂ, ಸಂಚಾಲಕ ಪ್ರವೀಣ್ ಫರ್ನಾಂಡಿಸ್, ಕೋಶಾಧಿಕಾರಿ ಅಶೋಕ್ ಪಾಣೂರು, ಕಾರ್ಯದರ್ಶಿ ಭರತ್‌ರಾಜ್ ಇತರರು ಇದ್ದರು.
ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಕೋಟ್ಯಾನ್ ಸ್ವಾಗತಿಸಿದರು. ಸತೀಶ್ ಹೊಸ್ಮಾರು ನಿರ್ವಹಿಸಿದರು. ಕಂಬಳ ಸಮಿತಿ ಕಾರ್ಯಾಧ್ಯಕ್ಷ ಶೇಖರ ಕುಕ್ಕೇಡಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net