ಬಿ.ಸಿ.ರೋಡ್‌ನಿಂದ ಅಡ್ಡಹೊಳೆ ಹೊಸ ಹೆದ್ದಾರಿ ಕಾಮಗಾರಿ ಇತ್ತೀಚೆಗೆ ಬಹುತೇಕ ಮುಕ್ತಾಯವಾಗಿದ್ದು, ಹೆಚ್ಚಿನ ಕಡೆಯಲ್ಲಿ ಬೆಳಕಿನ ವ್ಯವಸ್ಥೆ ಇದೆ. ಜತೆಗೆ, ಬಿ.ಸಿರೋಡ್‌ನಿಂದ ಧರ್ಮಸ್ಥಳ ಕಡೆಗೆ ತೆರಳುವ ರಸ್ತೆಯಲ್ಲಿಯೂ ಬಹುತೇಕ ಕಡೆಯಲ್ಲಿ ಬೆಳಕಿನ ವ್ಯವಸ್ಥೆ ಇದೆ. ಆದರೆ, ಈ ಎರಡೂ ರಸ್ತೆಯಿಂದ ಬಂದವರು ಬಿ.ಸಿ.ರೋಡ್‌ನಿಂದ ಮಂಗಳೂರು ಸಂಚರಿಸಬೇಕಾದರೆ ತಮ್ಮದೇ ವಾಹನಗಳ ಬೆಳಕಿನಲ್ಲಿ ಸಂಚರಿಸುವ ಅನಿವಾರ್ಯತೆ ಇದೆ.