ಒಳ್ಳೆಯ ಕೆಲಸದಿಂದ ಬದುಕಿನ ಸಾರ್ಥಕ್ಯ

 ಸಾಲಿಗ್ರಾಮ ಕೂಟ ಮಹಾ ಜಗತ್ತು ಕಿರಿಮಂಜೇಶ್ವರ ಘಟಕದ ಮಹಾಸಭೆಯಲ್ಲಿ ನಿಕಟಪೂರ್ವಾಧ್ಯಕ್ಷ ಗಣೇಶ ಮಯ್ಯ ಬಿ.ಸಿ. ದಂಪತಿಯನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಗಣೇಶ ಮಧ್ಯಸ್ಥ, ಚಂದ್ರಶೇಖರ ನಾವಡ, ವಾಸುದೇವ ನಾವಡ ಮೊದಲಾದವರಿದ್ದರು.
ಸಾಲಿಗ್ರಾಮ ಕೂಟ ಮಹಾ ಜಗತ್ತು ಕಿರಿಮಂಜೇಶ್ವರ ಘಟಕದ ಮಹಾಸಭೆಯಲ್ಲಿ ನಿಕಟಪೂರ್ವಾಧ್ಯಕ್ಷ ಗಣೇಶ ಮಯ್ಯ ಬಿ.ಸಿ. ದಂಪತಿಯನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಗಣೇಶ ಮಧ್ಯಸ್ಥ, ಚಂದ್ರಶೇಖರ ನಾವಡ, ವಾಸುದೇವ ನಾವಡ ಮೊದಲಾದವರಿದ್ದರು.
Published on
ಬೈಂದೂರು: ನಶ್ವರವಾಗಿರುವ ಮನುಷ್ಯ ಜೀವನದಲ್ಲಿ ಇರುವಷ್ಟು ದಿನ ಒಳ್ಳೆಯ ಕೆಲಸ ವಾಡಿ ಬದುಕಿನ ಸಾರ್ಥಕ್ಯ ಕಾಣಬೇಕು. ಆಸ್ತಿ, ಐಶ್ವರ್ಯ ಅಹಂ ತ್ಯಜಿಸಿ ಸವಾಜ ಬಾಂಧವರ, ಅಶಕ್ತರ ನೆರವಿಗೆ ನಿಲ್ಲಬೇಕು ಎಂದು ಕೂಟ ಮಹಾಜಗತ್ತು ಉಡುಪಿ ಘಟಕದ ಅಧ್ಯಕ್ಷ ಗಣೇಶ ಮಧ್ಯಸ್ಥ ಹೇಳಿದರು.
ಕಿರಿಮಂಜೇಶ್ವರದಲ್ಲಿ ನಡೆದ ಸಾಲಿಗ್ರಾಮ ಕೂಟ ಮಹಾ ಜಗತ್ತು ಕಿರಿಮಂಜೇಶ್ವರ ಘಟಕದ 28ನೇ ವಾರ್ಷಿಕ ಮಹಾಸಭೆಯಲ್ಲಿ ವಾತನಾಡಿದರು.
ಘಕಾಧ್ಯಕ್ಷ ಬೈಂದೂರು ಚಂದ್ರಶೇಖರ ನಾವಡ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವಾಧ್ಯಕ್ಷ ಗಣೇಶ ಮಯ್ಯ ಬಿ.ಸಿ. ದಂಪತಿಯನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳು ನಡೆದವು.
ಕಾರ್ಯದರ್ಶಿ ವಾಸುದೇವ ನಾವಡ, ಮಹಿಳಾ ವೇದಿಕೆ ಅಧ್ಯಕ್ಷೆ ಆಶಾ ಕಾರಂತ ಮತ್ತು ಬಿಲಿಯನ್ ಫೌಂಡೇಶನ್ ಪ್ರತಿನಿಧಿ ನಾರಾಯಣ ಮಧ್ಯಸ್ಥ, ವ್ನಿೇಶ್ ಜೋಶಿ ಮೊದಲಾದವರಿದ್ದರು. ಬೆಳಗ್ಗೆ ಜೋಶಿ ರಾಮಕೃಷ್ಣ ಕಾರಂತ್ ನೇತೃತ್ವದಲ್ಲಿ ಗಣಪತಿ ಹೋಮ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net