ಸಭೆಯಲ್ಲಿ ಸದಸ್ಯರು ರಾ.ಹೆ. ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದರು. ಡಿಪಿಆರ್ ಆಗಿಲ್ಲ ಎದು ಸಹಾಯಕ ಹೆದ್ದಾರಿ ಅಭಿಯಂತ ವಿಘ್ನೇಶ್ ಉತ್ತರಿಸಿದರು. ತೊಕ್ಕೊಟ್ಟಿನಿಂದ ತಲಪಾಡಿವರೆಗೆ ಸರ್ವೀಸ್ ರಸ್ತೆ ಅಸಮರ್ಪಕವಾಗಿದೆ. ಬೈಪಾಸ್‌ನಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಡಿಪಿಆರ್‌ನಲ್ಲಿ ಸರ್ವೀಸ್ ರಸ್ತೆಯೂ ಬರುತ್ತದೆ, ಆದರೆ ಈಗ ಡಿಪಿಆರ್ ಆಗಿಲ್ಲ ಎಂದು ಹೇಳುತ್ತಿದ್ದೀರಿ. ಶೇ.100 ರಸ್ತೆ ಆಗದೆ ಟೋಲ್ ಯಾಕೆ ಸಂಗ್ರಹ ಮಾಡುತ್ತಿದ್ದೀರಿ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ನೀರಿನ ಹರಿಯುವ. ಚರಂಡಿ ಸಮಸ್ಯೆ, ದಾರಿದೀಪ ಸಮಸ್ಯೆ ಇದ್ದು, ಈ ಬಗ್ಗೆ ಅಧಿಕಾರಿಗಳಿಗೆ ನೀಡಿದ ಮನವಿಗಳು ಏನಾಗಿದೆ ಎಂದು ಬಿಜೆಪಿಯ ಉಚ್ಛಾಟಿತ ಸದಸ್ಯ ಸುಜಿತ್ ಮಾಡೂರು ಪ್ರಶ್ನಿಸಿದರು. ಇದೊಂದು ಗಂಭೀರ ಸಮಸ್ಯೆಯಾಗಿದ್ದರೂ ಇತರ ಸದಸ್ಯರಿಂದ ನಿರೀಕ್ಷಿತ ಬೆಂಬಲ ಸಿಗದ ಕಾರಣ ಹೆಚ್ಚು ಚರ್ಚೆ ನಡೆಯಲಿಲ್ಲ.